Monday, July 4, 2022
Home ಸಮಾಚಾರ ಜೆಡಿಎಸ್ ಪದಾಧಿಕಾರಿಗಳ ಸಭೆ

ಜೆಡಿಎಸ್ ಪದಾಧಿಕಾರಿಗಳ ಸಭೆ

ಜೆಡಿಎಸ್ ಪದಾಧಿಕಾರಿಗಳ ಸಭೆ
ಉಡುಪಿ: ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಸಭೆ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಮುಂಬರುವ ಗ್ರಾ. ಪಂ. ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲುವ ಬಗ್ಗೆ ಚರ್ಚಿಸಲಾಯಿತು.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಜಾರಿಗೊಳಿಸಿದ್ದ ಮಹಿಳಾ ಮೀಸಲಾತಿ, ನೀರಾವರಿ ಇನ್ನಿತರ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜಾರಿಗೊಳಿಸಿದ್ದ ರೈತರ ಸಾಲ ಮನ್ನಾ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ ಏರಿಕೆ ಇತ್ಯಾದಿಗಳ ಬಗ್ಗೆ ಮತದಾರರಿಗೆ ತಿಳಿಸಿ ಮತ ಯಾಚಿಸುವಂತೆ ಯೋಗೀಶ ಶೆಟ್ಟಿ ತಿಳಿಸಿದರು.

ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ವಂದಿಸಿದರು.

ಸಭೆಯಲ್ಲಿ ಜಯಕುಮಾರ್ ಪರ್ಕಳ, ಬಾಲಕೃಷ್ಣ ಆಚಾರ್ಯ, ಶ್ರೀಕಾಂತ ಹೆಬ್ರಿ, ರಮೇಶ್ ಕುಂದಾಪುರ, ಪ್ರಕಾಶ್ ಶೆಟ್ಟಿ, ರವಿರಾಜ್ ಸಾಲಿಯಾನ್, ಎಸ್. ಪಿ. ಬರ್ಬೋಜಾ, ಹರಿಣಿ ಆರ್. ಕೋಟ್ಯಾನ್, ಇಕ್ಬಾಲ್ ಆತ್ರಾಡಿ, ಅಬ್ದುಲ್ ರಜಾಕ್, ಹುಸೇನ್ ಹೈಕಾಡಿ, ಮಾರುತಿ ಮೊಗೇರ, ಮಮತಾ, ಯು. ಎ. ರಶೀದ್, ಆರ್. ಎನ್. ಕೋಟ್ಯಾನ್, ಸನಾವರ್ ಕಲೀಂ, ಇಕ್ಬಾಲ್ ಅಹ್ಮದ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!