ಸುದ್ದಿಕಿರಣ ವರದಿ
ಸೋಮವಾರ, ಮೇ 9
ಜೈಲು ಸೇರಿದ ದಿವ್ಯಾ ಹಾಗರ್ಗಿ
ಕಲಬುರ್ಗಿ: ಪಿಎಸ್.ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರ್ಗಿಯನ್ನು ಸೋಮವಾರ ಸಂಜೆ ವೇಳೆಗೆ ಸೆರೆಮನೆಗೆ ಸೇರಿಸಲಾಗಿದೆ.
ಆಕೆ 11 ದಿನಗಳ ಕಾಲ ಸಿಐಡಿ ವಶದಲ್ಲಿದ್ದು, ಇಂದು ಇಲ್ಲಿನ ಸೆಂಟ್ರಲ್ ಜೈಲ್ಗೆ ರವಾನಿಸಲಾಯಿತು.
ಕಲ್ಬುರ್ಗಿ ಮೂರನೇ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ 11 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿತ್ತು.
ಆ ಅವಧಿ ಪೂರ್ಣಗೊಂಡ ಬಳಿಕ ಆಕೆಯನ್ನು ಸೆರೆಮನೆಗೆ ಕಳಿಸಲಾಯಿತು