Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಯಲ್ಲಿ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ

ಜಿಲ್ಲೆಯಲ್ಲಿ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ

ಸುದ್ದಿಕಿರಣ ವರದಿ
ಸೋಮವಾರ, ಮೇ 16

ಜಿಲ್ಲೆಯಲ್ಲಿ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ
ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ ಟೊಮೆಟೊ ಜ್ವರ ಪ್ರಕರಣ ಪತ್ತೆಯಾಗಿಲ್ಲ. ಪೋಷಕರು ಅನಗತ್ಯ ಆತಂಕಪಡುವ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಮಕ್ಕಳಲ್ಲಿ ಜ್ವರ ಕಂಡು ಬಂದಾಗ ತಾಂತ್ರಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ.

ಟೊಮೆಟೊ ಜ್ವರವನ್ನು ಹೋಲುವ ಪ್ರಕರಣವೊಂದು ಕಳೆದ ಮೂರು ತಿಂಗಳ ಹಿಂದೆ ಪತ್ತೆಯಾಗಿತ್ತು. ಫೂಟ್ ಆಂಡ್ ಹ್ಯಾಂಡ್ ಲಕ್ಷಣಗಳಿರುವ ಪ್ರಕರಣ ಇದಾಗಿತ್ತು. ಈ ವಿಷಯದ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ಮಾಡಲಾಗಿದೆ ಎಂದರು.

ಕೇರಳದಲ್ಲಿ ಪ್ರಕರಣ ಪತ್ತೆಯಾದ ನಂತರ ಮಕ್ಕಳ ತಜ್ಞರಿಗೆ ಸೂಚನೆ ನೀಡಲಾಗಿದೆ. ನಿರಂತರ ಸರ್ವೇಕ್ಷಣೆ ನಡೆಸಲಾಗುತ್ತಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!