Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಈಶ್ವರನಗರ ವಾರ್ಡ್ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ

ಈಶ್ವರನಗರ ವಾರ್ಡ್ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ

ಉಡುಪಿ: ಶಾಸಕ ರಘುಪತಿ ಭಟ್ ವಿಶೇಷ ಮುತುವರ್ಜಿ ಹಾಗೂ ನಗರಸಭೆ ಸ್ಥಳೀಯ ಸದಸ್ಯ ಮಂಜುನಾಥ ಮಣಿಪಾಲ ಮನವಿ ಮೇರೆಗೆ ಮಂಜೂರಾದ ಮಣಿಪಾಲ ಈಶ್ವರನಗರ ವಾರ್ಡ್ ನ ಎಂಟನೇ ಮತ್ತು ಒಂಬತ್ತನೇ ಅಡ್ಡ ರಸ್ತೆಯ ಸುಮಾರು 475 ಮೀ. ಉದ್ದದ ರಸ್ತೆ ಮರುಡಾಮರೀಕರಣ ಕಾಮಗಾರಿಗೆ ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಚಾಲನೆ ನೀಡಿದರು.
ಬೂತ್ ಅಧ್ಯಕ್ಷ ಗಿರೀಶ್, ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಹಸಂಚಾಲಕ ಸುಬ್ರಮಣ್ಯ ಪೈ, ಮಹಿಳಾ ಮೋರ್ಚಾ ಕೋಶಾಧಿಕಾರಿ ಮಾಯಾ ಕಾಮತ್, ನಗರ ಶಿಕ್ಷಣ ಸಂಸ್ಥೆಗಳ ಪ್ರಕೋಷ್ಠ ಸಂಚಾಲಕ ಹರೀಶ್ ಜಿ. ಕಲ್ಮಾಡಿ, ಸಾಂಸ್ಕೃತಿಕ ಪ್ರಕೋಷ್ಠ ಸಂಚಾಲಕ ಶ್ರೀನಾಥ ಮಣಿಪಾಲ, ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತೀಶ್ ಸಾಲಿಯಾನ್, ವಾರ್ಡ್ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ಪೈ, ಸ್ಥಳೀಯರಾದ ಸುಧಾಕರ ನಾಯ್ಕ, ಶೀಲಾ, ಜನಾರ್ದನ ನಾಯಕ್, ಗುತ್ತಿಗೆದಾರ ಮಹೇಶ್ ಪಿ. ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!