Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಡಿ.ಸಿ.ಮನ್ನಾ ಭೂಮಿ ದಲಿತರಿಗೆ ಹಂಚಿಕೆ ಮಾಡಿ

ಡಿ.ಸಿ.ಮನ್ನಾ ಭೂಮಿ ದಲಿತರಿಗೆ ಹಂಚಿಕೆ ಮಾಡಿ

ಡಿ.ಸಿ.ಮನ್ನಾ ಭೂಮಿ ದಲಿತರಿಗೆ ಹಂಚಿಕೆ ಮಾಡಿ

ಉಡುಪಿ: ದಲಿತರ ಅಭಿವೃದ್ಧಿಗೆ ಭೂಮಿ ಇಲ್ಲದೆ ವಿಮೋಚನೆ ಅಸಾಧ್ಯ ಎಂದು ಬ್ರಿಟಿಷ್ ಆಡಳಿತ, ದಲಿತರಿಗೆ ಮೀಸಲಿರಿಸಿದ ಡಿ.ಸಿ ಭೂಮಿಯನ್ನು ತಕ್ಷಣ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಕರ್ನಾಟಕ ದಲಿತ ಸಂಘಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆ ಜಂಟಿಯಾಗಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸಿತು

ವಂಚಿತ ದಲಿತರಿಗೆ ಭೂಮಿ ನೀಡಿ
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಭೂಮಿ ಒಡೆತನದಲ್ಲಿನ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಿ ದಲಿತ ಭೂ ವಂಚಿತರಿಗೆ ಭೂಮಿ ಕೊಡಬೇಕು. ಅನೇಕ ಜಿಲ್ಲಾಧಿಕಾರಿಗಳು ಹಲವಾರು ವರ್ಷಗಳಿಂದ ಕೇವಲ ಭರವಸೆ ನೀಡಿಯೇ ಕಾಲಕಳೆದರೇ ವಿನಾಃ ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಜಯನ್ ಆರೋಪಿಸಿದರು.

ದಲಿತ ಮುಖಂಡ ಮಂಜುನಾಥ ಗಿಳಿಯಾರು ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದುವರೆ ಸಾವಿರ ಎಕ್ರೆ ಡಿ.ಸಿ ಭೂಮಿಯಿದ್ದು, ಅದರಲ್ಲಿ ಯಾವುದೇ ವಿವಾದವಿಲ್ಲದ ಸುಮಾರು ಏಳುನೂರು ಎಕ್ರೆ ಭೂಮಿಯನ್ನು ಅನೇಕ ಕಡೆ ಮನೆ ನಿರ್ಮಾಣ ಮಾಡಿಕೊಂಡು ಕೃಷಿ ನಡೆಸುವ ದಲಿತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ನಾಗರಾಜು ಉಪ್ಪುಂದ, ನಾರಾಯಣ ಗುಂಡ್ಮಿ, ಪುರಸಭಾ ಸದಸ್ಯ ಪ್ರಭಾಕರ ಕುಂದಾಪುರ, ಸುರೇಶ್ ಬಾರ್ಕೂರು,ನಾಗರಾಜು ಸಟ್ಚಾಡಿ, ಸುರೇಶ್ ಹಕ್ಲಾಡಿ, ಗೀತಾ ಸುರೇಶ್, ಮಂಜುನಾಥ ನಾಗೂರು, ಸುರೇಶ್ ಅಂಪಾರು, ಲಕ್ಷ್ಮಣ ಬೈಂದೂರು, ಮಂಜುನಾಥ ಕಪ್ಪೆಟ್ಟು, ಸುರೇಶ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್ ಮಲ್ಪೆ, ಪ್ರಸಾದ್ ಮಲ್ಪೆ, ಬಿ.ಎನ್. ಪ್ರಸಾದ್ ಸೇರಿದಂತೆ ಸುಮಾರು 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು

ಮನವಿ ಸ್ವೀಕವಿಸಿದ ಜಿಲ್ಲಾಧಿಕಾರಿ ಆದಷ್ಟು ಬೇಗ ಈ ಬಗ್ಗೆ ವಿಶೇಷ ಸಭೆ ಕರೆಯುವುದಾಗಿ ಭರವಸೆ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!