Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ತಟ್ಟೀರಾಯನ ಮೂಲಕ ಜಾಗೃತಿ

ತಟ್ಟೀರಾಯನ ಮೂಲಕ ಜಾಗೃತಿ

ಮೂಡುಬಿದಿರೆ: ಅಭಜಿತ ದ. ಕ. ಜಿಲ್ಲೆಯ ಬಹುತೇಕ ದೇವಾಲಯಗಳ ಜಾತ್ರೆ ಹಾಗೂ ವಿಶೇಷ ಸಂದರ್ಭದಲ್ಲಿ ಬೃಹತ್ ಗಾತ್ರದ ಮಾನವಾಕೃತಿ ರಚಿಸಿ, ಅದರೊಳಗೆ ಹೊಕ್ಕು ಕುಣಿದು ರಂಜಿಸುವುದು ಸಾಮಾನ್ಯ. ತಟ್ಟೀರಾಯ ಎಂದು ಕರೆಯಲ್ಪಡುವ ಈ ಬೃಹತ್ ಗೊಂಬೆಗಳ ಮೂಲಕವೂ ಜಾಗೃತಿ ಹಾಗೂ ಸರ್ಕಾರದ ಮಾರ್ಗಸೂಚಿ ಪಾಲನೆಯ ಸಂದೇಶ ನೀಡಲು ಸಾಧ್ಯ ಎಂಬುದನ್ನು ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸಾಧಿಸಿ ತೋರಿಸಲಾಗಿದೆ.

ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕಳೆದ ಏ. 21ರಂದು ನಡೆದ ಶ್ರೀರಾಮ ನವಮಿ ಮಹೋತ್ಸವ ಹಾಗೂ 22ರಂದು ನಡೆದ ಬ್ರಹ್ಮರಥೋತ್ಸವ ಕಾರ್ಯಕ್ರಮ ಸರ್ಕಾರದ ಕೋವಿಡ್ ನಿಯಮಾವಳಿಯಂತೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ತಟ್ಟೀರಾಯನಿಗೆ ಮಾಸ್ಕ್ ಅಳವಡಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮತ್ತು ದೇವಳಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಸಂದೇಶ ನೀಡಲಾಯಿತು.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!