Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ಪೇಜಾವರಶ್ರೀ

ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ಪೇಜಾವರಶ್ರೀ

ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾದ ಪೇಜಾವರಶ್ರೀ
ಉಡುಪಿ: ತಮಿಳುನಾಡು ಪ್ರವಾಸದಲ್ಲಿರುವ ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದರು.

ಶ್ರೀಗಳನ್ನು ಆದರದಿಂದ ಬರಮಾಡಿಕೊಂಡ ರಾಜ್ಯಪಾಲರು, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಮಹತ್ವದ ಜವಾಬ್ದಾರಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಉಭಯ ಕುಶಲೋಪರಿ ನಡೆಸಿದ ಬಳಿಕ ಅಯೋಧ್ಯೆ ರಾಮಮಂದಿರ ಕಾರ್ಯಗಳ ಕುರಿತಾಗಿ ಸಮಾಲೋಚನೆ ನಡೆಸಿದರು. ಮಂದಿರ ನಿರ್ಮಾಣದ ಮಹತ್ಕಾರ್ಯದಲ್ಲಿ ತಮಿಳುನಾಡಿನ ಸಮಸ್ತ ಜನತೆಯ ಸಹಭಾಗಿತ್ವ, ಬೆಂಬಲ ಮತ್ತು ಸಹಕಾರದ ಆಶಯವುಳ್ಳ ಪತ್ರವನ್ನು ರಾಜ್ಯಪಾಲರಿಗೆ ಶ್ರೀಗಳು ನೀಡಿ, ಅವರ ಸಹಕಾರ ಅಪೇಕ್ಷಿಸಿದರು. ಅವರನ್ನು ಉಡುಪಿಗೂ ಆಹ್ವಾನಿಸಿದರು.

ರಾಜ್ಯಪಾಲರನ್ನು ಶ್ರೀಗಳು ಸತ್ಕರಿಸಿ, ಉಡುಪಿ ಕೃಷ್ಣನ ವಿಗ್ರಹವುಳ್ಳ ಸ್ಮರಣಿಕೆ ನೀಡಿ ಗೌರವಿಸಿದರು.

ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಸು. ಶ್ರೀನಿವಾಸನ್, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಆಚಾರ್ಯ ಮತ್ತು ಕೃಷ್ಣ ಭಟ್ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!