Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತಾಲೂಕು ಕಚೇರಿ ಆವರಣದಲ್ಲಿ ವನಮಹೋತ್ಸವ

ತಾಲೂಕು ಕಚೇರಿ ಆವರಣದಲ್ಲಿ ವನಮಹೋತ್ಸವ

ಉಡುಪಿ: ಇಲ್ಲಿನ ತಾಲೂಕು ಕಚೇರಿ ಒಳಾಂಗಣ ಮತ್ತು ಹೊರಾಂಗಣದಲ್ಲಿ ಫಲ ಕೊಡುವ ಗಿಡ ನೆಡುವ ಕಾರ್ಯಕ್ರಮಕ್ಕೆ ಬುಧವಾರ ಶಾಸಕ ರಘುಪತಿ ಭಟ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಉಡುಪಿ ನಗರ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಬನ್ನಂಜೆ, ಉಡುಪಿ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯಕಾರಣಿ ಮಾಜಿ ಸದಸ್ಯ ವಾಸುದೇವ ಬನ್ನಂಜೆ, ಉಡುಪಿ ನಗರ ಬಿಜೆಪಿ ಎಸ್.ಸಿ ಮೋರ್ಚಾ ಸದಸ್ಯ ಸುಧಾಕರ ಕಿನ್ನಿಮೂಲ್ಕಿ, ಬನ್ನಂಜೆ ಬೂತ್ ಸಮಿತಿ ಅಧ್ಯಕ್ಷ ಸುಧಾಕರ್ ಪೂಜಾರಿ ಹಾಗೂ ಶೇಖ್ ವಹಿದ್ ಇಂದ್ರಾಳಿ, ಕುಮಾರ್ ಅಂಬಾಗಿಲು, ಹಾಲೇಶ್ ಕೊಡಂಕೂರು, ಪ್ರಸಾದ್ ಪೆರಂಪಳ್ಳಿ, ವೈ. ಸೇಸು ಎರ್ಮಾಳ್ ಮತ್ತು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ಉಪೇಂದ್ರ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!