Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ತುಳು ಮಾನ್ಯತೆಗೆ ರಾಜ್ಯಸಭೆಯಲ್ಲಿ ಯತ್ನ: ಹೆಗ್ಗಡೆ ಭರವಸೆ

ತುಳು ಮಾನ್ಯತೆಗೆ ರಾಜ್ಯಸಭೆಯಲ್ಲಿ ಯತ್ನ: ಹೆಗ್ಗಡೆ ಭರವಸೆ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ತುಳು ಮಾನ್ಯತೆಗೆ ರಾಜ್ಯಸಭೆಯಲ್ಲಿ ಯತ್ನ: ಹೆಗ್ಗಡೆ ಭರವಸೆ
ಧರ್ಮಸ್ಥಳ: ತುಳು ಭಾಷೆಗೆ ಮಾನ್ಯತೆ ಲಭಿಸುವಂತಾಗಲು ರಾಜ್ಯಸಭೆಯಲ್ಲಿ ಪ್ರಯತ್ನಿಸುವುದಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಭರವಸೆ ನೀಡಿದರು.

ರಾಜ್ಯಸಭಾ ಸದಸ್ಯರಾಗಿ ನಾಮಕರಣಗೊಂಡ ಡಾ| ಹೆಗ್ಗಡೆ ಅವರನ್ನು ಜೈ ತುಳುನಾಡ್ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಭಿನಂದಿಸಿ, ತುಳುಮಾತೆಯ ಛಾಯಾಚಿತ್ರ ನೀಡಿ ಗೌರವಿಸಿದರು.

ತುಳುವನ್ನು ಅಧಿಕೃತ ಭಾಷೆಯನ್ನಾಗಿಸಲು ಖಂಡಿತ ಪ್ರಯತ್ನಿಸುವುದಾಗಿ ತಿಳಿಸಿದ ಡಾ| ಹೆಗ್ಗಡೆ, ರಾಜ್ಯಸಭಾ ಸದಸ್ಯನಾಗಿ ತನಗೆ ತುಳುಭಾಷೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಉತ್ತಮ ಅವಕಾಶ ಲಭಿಸಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್ ರಾಜ್ ಜೈನ್, ಜೈ ತುಳುನಾಡ್ ಸಂಘಟನೆ ಅಧ್ಯಕ್ಷ ಅಶ್ವಥ್ ತುಳುವೆ, ಸ್ಥಾಪಕ ಸದಸ್ಯ ಕಿರಣ್ ತುಳುವೆ, ತುಲು ಸಾಹಿತ್ಯ ಸಂಸ್ಕೃತಿ ಸಮಿತಿಯ ಕುಶಾಲಾಕ್ಷೀ ವಿ. ಕಣ್ವತೀರ್ಥ, ಉಪಸಂಘಟನಾ ಕಾರ್ಯದರ್ಶಿ ಪೃಥ್ವಿ ತುಳುವೆ, ಪ್ರಚಾರ ಸಮಿತಿಯ ವಿನಯ್ ರೈ ಕುಡ್ಲ, ತುಳುನಾಡು ಒಕ್ಕೂಟ ಸಂಸ್ಥಾಪಕ ಶೈಲೇಶ್ ಆರ್. ಜೆ., ಚಾವಡಿ ಕೂಟ ಅಧ್ಯಕ್ಷ ಶೇಖರ್ ಗೌಡತ್ತಿಗೆ, ಬೊಲ್ತೇರ್ ತಾಲೂಕು ಕೂಟ ಅಧ್ಯಕ್ಷ ರಾಜೇಶ್ ಕುಲಾಲ್, ತುಳುವೆರೆ ಪಕ್ಷ ಚಾವಡಿ ಕೂಟ ಉಪಾಧ್ಯಕ್ಷ ನವೀನ್ ಪೂಜಾರಿ ಅಡ್ಕದಬೈಲು, ತುಳುವರೆ ಪಕ್ಷ ಕರಂಬಾರ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಮುಗಿದು ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಮುಗೇರ್ ಗ್ರಾಮ ಸಮಿತಿದ ಅಧ್ಯಕ್ಷ ಅಶ್ವಥ್ ಕುಲಾಲ್, ಬೊಲ್ತೇರ್ ಗ್ರಾಮ ಸಮಿತಿ ಉಪಾಧ್ಯಕ್ಷ ರಮೇಶ್ ಸಾಲಿಯಾನ್ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಸಂವಿಧಾನದ ಕಲಂ 347ರ ಪ್ರಕಾರ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾನ್ಯತೆ ಲಭಿಸಲು ಜನಪ್ರತಿನಿಧಿಗಳು ಹೇಳುತ್ತಿರುವ ತಾಂತ್ರಿಕ ಕಾರಣ ನಿವಾರಿಸುವಂತೆ ಶ್ರೀ ಮಂಜುನಾಥಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!