Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಆಟೋ- ಟ್ಯಾಕ್ಸಿ ಚಾಲಕರಿಗೆ ಲಸಿಕೆ: ದಾಖಲೆ ಸಲ್ಲಿಸಲು ಸೂಚನೆ

ಆಟೋ- ಟ್ಯಾಕ್ಸಿ ಚಾಲಕರಿಗೆ ಲಸಿಕೆ: ದಾಖಲೆ ಸಲ್ಲಿಸಲು ಸೂಚನೆ

ಉಡುಪಿ: ಜಿಲ್ಲೆಯ ತ್ರಿಚಕ್ರ, ಚತುಃಚಕ್ರ (ಟ್ಯಾಕ್ಸಿ) ವಾಹನ ಚಾಲಕರಿಗೆ ಅದರಲ್ಲೂ 20 ವರ್ಷ ಮೇಲ್ಪಟ್ಟು 44 ವರ್ಷದೊಳಗಿನವರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಯೂನಿಯನ್ ಮೂಲಕ ಅಥವಾ ಖುದ್ದಾಗಿ ಡಿಎಲ್ ಮತ್ತು ಆಧಾರ್ ಕಾರ್ಡ್ ನೆರಳುಪ್ರತಿ ಹಾಗೂ ಭಾವಚಿತ್ರದೊಂದಿಗೆ ಅರ್ಜಿಯನ್ನು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಗೆ ತುರ್ತಾಗಿ ಸಲ್ಲಿಸುವಂತೆ ಆರ್.ಟಿ.ಓ. ಜೆ.ಪಿ. ಗಂಗಾಧರ್ ತಿಳಿಸಿದ್ದಾರೆ.

ಈ ಎಲ್ಲ ಮಾಹಿತಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಬೇಕಾದ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಸಲ್ಲಿಸುವಂತೆ ತಿಳಿಸಿದ ಆರ್.ಟಿ.ಓ ಗಂಗಾಧರ್, ಈ ಕುರಿತ ಹೆಚ್ಚಿನ ಮಾಹಿತಿಯನ್ನು ಕಚೇರಿಯಿಂದ ಪಡೆಯಬಹುದು.

ಎಲ್ಲಾ ಟ್ಯಾಕ್ಸಿ ಹಾಗೂ ಆಟೋ ಚಾಲಕ ಮಾಲಕರು ಕಡ್ಡಾಯವಾಗಿ ಲಸಿಕೆ ಪಡೆಯಲೇಬೇಕು ಎಂದೂ ಆರ್.ಟಿ.ಓ ಮನವಿ ಮಾಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!