Thursday, December 2, 2021
Home ಸಮಾಚಾರ ಸಂಘಸಂಗತಿ ದಾನ ನೀಡುವುದು ಪರರ ಮೆಚ್ಚುಗೆಗಾಗಿ ಅಲ್ಲ

ದಾನ ನೀಡುವುದು ಪರರ ಮೆಚ್ಚುಗೆಗಾಗಿ ಅಲ್ಲ

ದಾನ ನೀಡುವುದು ಪರರ ಮೆಚ್ಚುಗೆಗಾಗಿ ಅಲ್ಲ

ಕಾರ್ಕಳ, ನ. 24 (ಸುದ್ದಿಕಿರಣ ವರದಿ): ಅನ್ಯರಿಗೆ ನೀಡುವ ದಾನ ನಮಗೆ ತಿಳಿದಿರಬೇಕೆ ಹೊರತು ಪರರ ಮೆಚ್ಚುಗೆಗಾಗಿ ಅಲ್ಲ. ಒಂದು ಕೈಯಿಂದ ಕೊಟ್ಟದ್ದು ಇನ್ನೊಂದು ಕೈಗೆ ತಿಳಿಯಬಾರದು. ನಮ್ಮ ದಾನದಿಂದ ದೇವರು ಸಂಪ್ರೀತರಾಗಬೇಕೇ ಹೊರತು ಬೇರೆಯವರ ಹೊಗಳಿಕೆಗೆ ಸೀಮಿತವಾಗಬಾರದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಪ್ರಾಂತ್ಯ ಅಧ್ಯಕ್ಷರ ಭೇಟಿ ಮತ್ತು ದೀಪಾವಳಿ ಹಬ್ಬ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಬದುಕನ್ನು ಬೇರೆಯವರಿಗಾಗಿ ವ್ಯಯಿಸುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹೆಸರು, ಯಶಸ್ಸು, ಗೌರವವನ್ನು ನಾವು ಹಿಂಬಾಲಿಸಕೂಡದು. ಆಗ ಅವುಗಳೇ ನಮ್ಮನ್ನು ಹಿಂಬಾಲಿಸುತ್ತವೆ ಎಂದರು.

ಅಭ್ಯಾಗತರಾಗಿದ್ದ ಪ್ರಾಂತ್ಯ ಅಧ್ಯಕ್ಷ ಲ| ಮಿಥುನ್ ಆರ್. ಹೆಗ್ಡೆ ಮಾತನಾಡಿ, ಕಾರ್ಕಳ ಲಯನ್ಸ್ ಸಂಸ್ಥೆಯ ಸಮಾಜಮುಖಿ ಕೆಲಸಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಕಾರ್ಕಳ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಲಿ ಎಂದು ಹಾರೈಸಿದರು.

ಪ್ರಾಂತ್ಯದ ಪ್ರಥಮ ಮಹಿಳೆ ಸ್ವಾತಿ ಎಂ. ಹೆಗ್ಡೆ, ಮಾಜಿ ಗವರ್ನರ್ ಸುರೇಶ ಪ್ರಭು, ಜಿಲ್ಲಾ ಕಾರ್ಯದರ್ಶಿ ಸಪ್ನಾ ಸುರೇಶ್, ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಪ್ರಾಂತ್ಯ ಸಲಹೆಗಾರ ಸತ್ಯಶಂಕರ ಶೆಟ್ಟಿ, ವಲಯ ಅಧ್ಯಕ್ಷ ಸುಭಾಷ್ ಸುವರ್ಣ ಇದ್ದರು.

ಪ್ರಾಂತ್ಯ ಮತ್ತು ಜಿಲ್ಲೆಯಿಂದ ಸುಮಾರು 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!