ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14
ದಿವ್ಯಾಂಗರ ತಪಾಸಣೆ ಶಿಬಿರ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಇಲಾಖೆ, ಅಲಿಮ್ಕೋ ಆಫ್ ಇಂಡಿಯಾ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧೀನದ ಜಿಲ್ಲಾ ದಿವ್ಯಾಂಗರ ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ ದಿವ್ಯಾಂಗರಿಗಾಗಿ ಕೇಂದ್ರ ಸರಕಾರದ ಎ.ಡಿ.ಐ.ಪಿ ಯೋಜನೆಯಡಿ ಗುರುತಿಸಲ್ಪಡುವ ದಿವ್ಯಾಂಗ ಫಲಾನುಭವಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳಾದ ಗಾಲಿ ಕುರ್ಚಿ, ಶ್ರವಣ ಸಾಧನ, ಕನ್ನಡಕ, ಕೃತಕ ಅವಯವ, ವಾಕರ್, ಊರುಗೋಲು, ವಾಕಿಂಗ್ ಸ್ಟಿಕ್, ಎಲ್.ಎಸ್ ಬೆಲ್ಟ್ ಇತ್ಯಾದಿ ವಿತರಿಸುವ ಸಲುವಾಗಿ ಪೂರ್ವಭಾವಿ ತಪಾಸಣೆ ಶಿಬಿರ ಮಂಗಳವಾರ ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ನಡೆಯಿತು.
ತಪಾಸಣಾ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಕೆ. ರತ್ನಾಕರ ಶೆಟ್ಟಿ, ಗೌರವ ಖಚಾಂಚಿ ರಮಾದೇವಿ, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಜಯಶ್ರೀ, ಫಿಸಿಯೊಥೆರಪಿಸ್ಟ್ ಸನಾ ಮೊದಲಾದವರಿದ್ದರು.