ಉಡುಪಿ: ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಶ್ಯಾಮಲಾ ಕುಂದರ್ ಇಲ್ಲಿನ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪ್ರಧಾನ ಅರ್ಚಕ ದಯಾಘನ ಭಟ್ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಆಡಳಿತ ಮೊಕ್ತೇಸರ ಪಿ. ವಿ. ಶೆಣೈ ದೇವರ ಪ್ರಸಾದ ನೀಡಿ ಗೌರವಿಸಿದರು.
ನಗರಸಭಾ ಮಾಜಿ ಸದಸ್ಯ ಶ್ಯಾಮಪ್ರಸಾದ್ ಕುಡ್ವ, ಮಟ್ಟಾರು ವಸಂತ ಕಿಣಿ, ರೋಹಿತಾಕ್ಷ ಪಡಿಯಾರ್, ಜಯರಾಮ ಕಾಮತ್, ಗಣೇಶ್ ಶೆಣೈ, ಗಣೇಶ ಕಿಣಿ ಮೊದಲಾದವರಿದ್ದರು.