Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ದೇವಸ್ಥಾನದ ಸಂಪತ್ತು ಯೋಜನೆಗಳಿಗೆ ಬಳಕೆ

ದೇವಸ್ಥಾನದ ಸಂಪತ್ತು ಯೋಜನೆಗಳಿಗೆ ಬಳಕೆ

ದೇವಸ್ಥಾನದ ಸಂಪತ್ತು ಯೋಜನೆಗಳಿಗೆ ಬಳಕೆ

ಉಡುಪಿ: ದೇವಸ್ಥಾನಗಳ ಸಂಪತ್ತನ್ನು ಕೆಲವು ಯೋಜನೆ ಹಾಗೂ ಇಲಾಖೆಗಳಿಗೆ ಸರಕಾರ ಬಳಸಿಕೊಂಡಿದೆ ಎಂದು ವಕೀಲ ಹಾಗೂ ಲೆಕ್ಕಪರಿಶೋಧಕ ಶ್ರೀಹರಿ ಕುತ್ಸ ಆರೋಪಿಸಿದ್ದಾರೆ.

ಪರ್ಯಾಯ ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆಯುತ್ತಿರುವ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಪರಿಸ್ಥಿತಿ ಕುರಿತು ಮಾತನಾಡಿದರು.

ಆಡಿಟ್ ರಿಪೋರ್ಟ್ ನಲ್ಲಿ ಬಹಿರಂಗ
ಜಾತ್ಯತೀತತೆ ಹೆಸರಿನಲ್ಲಿ ಅಧಿಕಾರ ನಡೆಸುವ ಅಧಿಕಾರಿಗಳಿಗೆ ದೇವಸ್ಥಾನಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ 100 ಕೋಟಿ ರೂ. ಹಾಗೂ ಕೊಲ್ಲೂರು ದೇವಸ್ಥಾನದ 44 ಕೋಟಿ ರೂ. ಪಿಡಬ್ಲ್ಯೂಡಿ ಇಲಾಖೆಯ ರಸ್ತೆ ಕಾಮಗಾರಿಗಳಿಗೆ ಬಳಕೆಯಾಗಿದೆ. ದೇವಸ್ಥಾನದ ಹಣವನ್ನು ಸರಕಾರಿ ಯೋಜನೆ ಹಾಗೂ ಇಲಾಖೆಗಳಿಗೆ ಬಳಸಿಕೊಂಡಿರುವುದು ರಾಜ್ಯ ಸರಕಾರದ ಆಡಿಟ್ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ ಎಂದರು.

ದೇವಸ್ಥಾನಗಳ ಆಸ್ತಿಪಾಸ್ತಿ ಹೆಚ್ಚಿಸುವ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚರಾಸ್ತಿ, ಸ್ಥಿರಾಸ್ತಿ ಬಗ್ಗೆ ದಾಖಲೆಗಳಿಲ್ಲ. ಭಕ್ತರು ನೀಡಿದ ಆಭರಣಗಳ ಮಾಹಿತಿ ಆಡಿಟ್ ಆಗಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!