Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿಂದೂ ದೈವ ದೇವರ ಅಪಹಾಸ್ಯ ಖಂಡನೀಯ

ಹಿಂದೂ ದೈವ ದೇವರ ಅಪಹಾಸ್ಯ ಖಂಡನೀಯ

ಸುದ್ದಿಕಿರಣ ವರದಿ
ಸೋಮವಾರ, ಜನವರಿ 10, 2022

ಹಿಂದೂ ದೈವ ದೇವರ ಅಪಹಾಸ್ಯ ಖಂಡನೀಯ
ಉಡುಪಿ: ಇತ್ತೀಚೆಗೆ ಹಿಂದೂ ದೈವ, ದೇವರನ್ನು ಅಪಹಾಸ್ಯ ಮಾಡುವ ಕೆಟ್ಟ ಪ್ರವೃತ್ತಿ ಮಿತಿ ಮೀರುತ್ತಿದೆ. ಕೊರಗಜ್ಜ ದೈವದ ಪ್ರತಿಕೃತಿಯಂತೆ ವೇಷ ತೊಟ್ಟು ಕುಣಿದು ವಿಕೃತಿ ಮೆರೆಯುವುದೂ ಸೇರಿದಂತೆ ಹಿಂದೂಗಳ ಶೃದ್ಧಾಕೇಂದ್ರಗಳ, ಪುಣ್ಯಕ್ಷೇತ್ರಗಳನ್ನು ಉದ್ದೇಶ ಪೂರ್ವಕವಾಗಿ ಅಪವಿತ್ರಗೊಳಿಸುವ ಹುನ್ನಾರ ಹೊಂದಿರುವ ಮತಾಂಧ ದುಷ್ಟ ಶಕ್ತಿಗಳ ಕುಕೃತ್ಯವನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ.

ಇಂಥ ಸಮಾಜಘಾತುಕ ಶಕ್ತಿಗಳನ್ನು ಸೂಕ್ತ ರೀತಿಯಲ್ಲಿ ಮಟ್ಟ ಹಾಕಿ ಸಾಮಾಜಿಕ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಯನ್ನು ಅವರು ಕೋರಿದ್ದಾರೆ.

ಸಾಮೂಹಿಕ ಪ್ರಾರ್ಥನೆ
ಇಂಥ ಧರ್ಮಬಾಹಿರ ಘಟನೆಗಳು ಮುಂದೆಂದೂ ನಡೆಯದಂತೆ ಹಾಗೂ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಜ.11ರಂದು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ ಮತ್ತು ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಮಾಡಿರುವ ವಿನಂತಿಯನ್ನು ಸ್ವಾಗತಿಸಿರುವ ಕುಯಿಲಾಡಿ, ಅದರಲ್ಲಿ ಪಕ್ಷ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಭಾಗವಹಿಸುವಂತೆ ವಿನಂತಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!