Monday, August 15, 2022
Home ಅಧ್ಯಾತ್ಮ ವಿಶ್ವೇಶತೀರ್ಥರ ದ್ವಿತೀಯ ಆರಾಧನೋತ್ಸವ ಆರಂಭ

ವಿಶ್ವೇಶತೀರ್ಥರ ದ್ವಿತೀಯ ಆರಾಧನೋತ್ಸವ ಆರಂಭ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 4, 2022

ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ಆರಂಭ

ಬೆಂಗಳೂರು: ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ , ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಆರಾಧನೋತ್ಸವ ಇಲ್ಲಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಆವರಣದಲ್ಲಿರುವ ಅವರ ಮೂಲ ವೃಂದಾವನ ಸನ್ನಿಧಿಯಲ್ಲಿ ಮಂಗಳವಾರ ಆರಂಭಗೊಂಡಿತು.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಹೋತ್ಸವ ನಡೆಯುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿ ಅನುಸಾರ ಧಾರ್ಮಿಕ ವಿಧಿ- ವಿಧಾನಗಳಿಗೆ ಸೀಮಿತಗೊಳಿಸಿ ಸರಳವಾಗಿ ನಡೆಸಲಾಗುತ್ತಿದೆ.

ಇಂದು ಪೂರ್ವಾರಾಧನೆ ಅಂಗವಾಗಿ ವಿದ್ಯಾಪೀಠದ ಋತ್ವಿಜರಿಂದ ಶ್ರೀ ರಾಮ‌- ಕೃಷ್ಣ- ವೇದವ್ಯಾಸ – ನರಸಿಂಹ ಮಂತ್ರ ಹೋಮಗಳು ನಡೆದವು.

ಸಂಜೆ ವಿದ್ವತ್ ಗೋಷ್ಠಿ ನಡೆಯಲಿದೆ.

ಬುಧವಾರ ಮಧ್ಯಾರಾಧನೆ ನಡೆಯಲಿದೆ. ಉಡುಪಿ ಹಾಗೂ ಮಂಗಳೂರಿನ ಸಮೀಪದ ಪೇಜಾವರದ ಮಠಗಳು ಮತ್ತು ಶ್ರೀ ವಿಶ್ವೇಶತೀರ್ಥರು ಉತ್ತರದ ಬದರಿಯಿಂದ ದಕ್ಷಿಣದ ರಾಮೇಶ್ವರದ ವರೆಗೆ ಸಂಸ್ಥಾಪಿಸಿದ ಎಲ್ಲ ಸಂಘಸಂಸ್ಥೆಗಳು ಹಾಗೂ ಶ್ರೀಮಠದ ಶಾಖೆಗಳಲ್ಲೂ ಆರಾಧನೆ ನಿಮಿತ್ತ ಧಾರ್ಮಿಕ ವಿಧಿಗಳಿಗೆ ಸೀಮಿತಗೊಳಿಸಿ ಗುರು ಸ್ಮರಣೆ ನಡೆಯಲಿದೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!