Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ನರ್ಮ್ ಬಸ್ ಸಂಚಾರ ಆರಂಭಿಸಲು ಆಗ್ರಹ

ನರ್ಮ್ ಬಸ್ ಸಂಚಾರ ಆರಂಭಿಸಲು ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದೆ. ಹಾಗಾಗಿ ವಾಣಿಜ್ಯ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳು, ವೃತ್ತಿ ಬದುಕು ಪ್ರಾರಂಭಗೊಂಡಿವೆ. ಜನಜೀವನ ನಿಧಾನ ಗತಿಯಲ್ಲಿ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ನಾಗರಿಕರು, ಕೂಲಿ ಕಾರ್ಮಿಕರು, ಉದ್ಯೋಗಿಗಳು, ಸಂಚಾರ ಸೌಕರ್ಯ ಇಲ್ಲದೆ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ನರ್ಮ್ ಬಸ್ಸು, ಖಾಸಗಿ ನಗರ ಸಂಚಾರಿ ಬಸ್ ಯಾವೊಂದೂ ಸಂಚರಿಸುತ್ತಿಲ್ಲ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ನಗರದ ಹೊರವಲಯದ ಕಾರ್ಮಿಕರು, ಸಾರ್ವಜನಿಕರು ದುಡಿಮೆಗಾಗಿ ಕಿ.ಮೀ.ಗಟ್ಟಲೆ ದೂರವನ್ನು ನಡಿಗೆಯಲ್ಲಿ ಸಂಚರಿಸಬೇಕಾಗಿರುವ ಚಿಂತಾಜನಕ ಸ್ಥಿತಿ ಉಡುಪಿ ನಗರದಲ್ಲಿ ಉದ್ಭವವಾಗಿದೆ.

ಲಾಕ್ ಡೌನ್ ಸಮಯದಲ್ಲಿ ದುಡಿಮೆ ಇಲ್ಲದೆ ಮನೆಯಲ್ಲಿ ದಿನ ಕಳೆಯುತ್ತಿದ್ದ ಶ್ರಮಿಕರು, ಅನ್ ಲಾಕ್ ಸಮಯದಲ್ಲಿ ದುಡಿಮೆಗೆ ಹೋಗಲು ನರ್ಮ್ ಬಸ್ಸು ಸಂಚಾರ ವ್ಯವಸ್ಥೆ ಇಲ್ಲದೆ ಕಾರ್ಮಿಕರ ಬದುಕು ಮತ್ತಷ್ಟು ಬಿಗಡಾಯಿಸಿದೆ.

ಹಾಗಾಗಿ ಜಿಲ್ಲಾಡಳಿತ, ನಗರ ಸಾರಿಗೆ ಸಂಸ್ಥೆ, ಶಾಸಕರು ತಕ್ಷಣ ನರ್ಮ್ ಬಸ್ಸು ಸಂಚಾರದ ವ್ಯವಸ್ಥೆಯನ್ನು ಕೋವಿಡ್ ನಿಯಮದಂತೆ ಉಡುಪಿ ನಗರದಲ್ಲಿ ವ್ಯವಸ್ಥೆಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!