Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ನವ ಕಾಪು ನಿರ್ಮಾಣದ ಬಿಜೆಪಿ ಸಂಕಲ್ಪಕ್ಕೆ ಗೆಲುವು

ನವ ಕಾಪು ನಿರ್ಮಾಣದ ಬಿಜೆಪಿ ಸಂಕಲ್ಪಕ್ಕೆ ಗೆಲುವು

ನವ ಕಾಪು ನಿರ್ಮಾಣದ ಬಿಜೆಪಿ ಸಂಕಲ್ಪಕ್ಕೆ ಗೆಲುವು

ಕಾಪು: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು12 ವಾರ್ಡುಗಳಲ್ಲಿ ಗೆಲ್ಲಿಸಿ ಪೂರ್ಣ ಬಹುಮತ ನೀಡುವ ಮೂಲಕ ಮತದಾರರು ಬಿಜೆಪಿಯ ನವ ಕಾಪು ನಿರ್ಮಾಣದ ಸಂಕಲ್ಪಕ್ಕೆ ಶಕ್ತಿ ತುಂಬಿರುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಗಳ ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳು ಹಾಗೂ ಪುರಸಭೆಯಲ್ಲಿ ಸ್ವಚ್ಛ, ದಕ್ಷ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಜನತೆ, ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ರಾಷ್ಟ್ರೀಯ ವಾದಿ ಚಿಂತನೆಯ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಪರಿಶ್ರಮ ಹಾಗೂ ಪಕ್ಷದ ನಾಯಕರ ಸಾಮೂಹಿಕ ನೇತೃತ್ವದಲ್ಲಿ ಬಿಜೆಪಿಯ ಪ್ರಚಂಡ ಗೆಲುವಿನ ಮೂಲಕ ಕಾಂಗ್ರೆಸ್ ಪಕ್ಷದ ವೈಫಲ್ಯ ಹಾಗೂ ಅಪಪ್ರಚಾರದ ಮೂಲಕ ಮಾಜಿ ಸಚಿವರು ನಡೆಸಿದ್ದ ಗೆಲುವಿನ ವ್ಯರ್ಥ ಪ್ರಯತ್ನಕ್ಕೆ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಲಿದ್ದು ಕಾಪುವಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅಡಳಿತ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದು ಯಶಪಾಲ್ ತಿಳಿಸಿದ್ದಾರೆ.

ಎಸ್.ಡಿ‌ಪಿಐ ಗೆಲುವು ಮಾರಕ

ರಾಷ್ಟ್ರ ವಿರೋಧಿ ಕೋಮುವಾದಿ ಚಿಂತನೆಯ ಎಸ್.ಡಿ.ಪಿ‌ಐ ಪಕ್ಷದ ಅಭ್ಯರ್ಥಿಗಳ ಗೆಲುವು ಆಡಳಿತ ವ್ಯವಸ್ಥೆಗೆ ಮಾರಕಗಿದ್ದು, ಹಲವಾರು ದೇಶ ವಿರೋಧಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಸ್.ಡಿ.ಪಿ.ಐ ಪಕ್ಷ ರಾಜಕೀಯವಾಗಿ ಕರಾವಳಿ ಭಾಗದಲ್ಲಿ ನೆಲೆ ಕಂಡುಕೊಳ್ಳುತ್ತಿರುವುದು ದುರದೃಷ್ಟಕರ.

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆಯ ನೀತಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಿದೆ ಎಂದು ಯಶಪಾಲ್ ಸುವರ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!