Monday, July 4, 2022
Home ಸಮಾಚಾರ `ನಾನು ಮಾತಿಗೆ ಬದ್ಧನಾಗಿ ನಡೆದಿದ್ದೇನೆ'

`ನಾನು ಮಾತಿಗೆ ಬದ್ಧನಾಗಿ ನಡೆದಿದ್ದೇನೆ’

ಉಡುಪಿ: ರಾಜಕೀಯ ಎಂಬುದು ವೃತ್ತಿಯಲ್ಲ, ಅದೊಂದು ಪವಿತ್ರ ಜವಾಬ್ದಾರಿ ಎಂದು ತಿಳಿದು ಕಾರ್ಯನಿರ್ವಹಿಸಿದ್ದ ತಾನು ಕೊಟ್ಟ ಮಾತಿಗೆ ಬದ್ಧನಾಗಿ ನಡೆದಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, `ನನ್ನನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಾಗ ನನ್ನ ಮನಸ್ಸಿನಲ್ಲಿ ನಾನು ಅಧಿಕಾರಕ್ಕಾಗಿ ಕೆಲಸ ಮಾಡಬಾರದು, ನನ್ನ ಕೆಲಸ ಜನರಿಗೆ ಅಧಿಕಾರ ನೀಡುವಂತಿರಬೇಕು ಎಂಬುದಾಗಿತ್ತು. ಕೇವಲ ರಾಜಕೀಯ ಮಾಡುವುದಿದ್ದರೆ ಹೇಗೂ ಮಾಡಬಹುದು.
ನಾನು ಜನಪ್ರತಿನಿಧಿಯಾಗಿದ್ದ ಸಂದರ್ಭ ನನ್ನ ಮೇಲೆ ಹಲವಾರು ಟೀಕೆಗಳನ್ನು ವಿರೋಧಿಗಳು ಮಾಡುತ್ತಿದ್ದರೂ ನಾನೆಂದೂ ಅದಕ್ಕೆ ಪ್ರತಿಕ್ರಿಯಿಸಲು ಇಚ್ಛಿಸಲಿಲ್ಲ. ಕಾರಣ ನನ್ನ ಸಮಯ ಜನಪರ ಕಾರ್ಯಗಳಲ್ಲಿ ಇರಬೇಕೇ ಹೊರತು ಕೆಸರಿಗೆ ಕಲ್ಲು ಹೊಡೆಯುವುದರಲ್ಲಿ ಅಲ್ಲ ಎಂಬುದಾಗಿತ್ತು.’ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗಕ್ಕೆ ಆದ್ಯತೆ
ಗ್ರಾಮೀಣ ಭಾಗಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಗ್ರಾಮಾಭಿವೃದ್ಧಿಗೆ ಒತ್ತುನೀಡಿದ್ದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಆರೋಗ್ಯ ಕೇಂದ್ರಗಳ ಅಭಿವೃದ್ಧಿ, ಪಶು ಚಿಕಿತ್ಸಾಲಯಗಳ ಅಭಿವೃದ್ಧಿ, ಕೆರೆಗಳ ಜೀರ್ಣೋದ್ಧಾರ, ಕಿಂಡಿ ಅಣೆಕಟ್ಟು ನಿರ್ಮಾಣ, ಸಂಪರ್ಕ ಸೇತುವೆ ನಿರ್ಮಾಣ, ಗ್ರಾಮೀಣ ಒಳರಸ್ತೆಗಳ ಕಾಂಕ್ರಿಟೀಕರಣ, ಗ್ರಾಮೀಣ ಭಾಗದಲ್ಲಿದ್ದ ಲೋ ವೊಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಟ್ರಾನ್ಸ್ ಫಾರ್ಮರ್ ಅಳವಡಿಕೆ, ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ, ವಿದ್ಯಾರ್ಥಿ ನಿಲಯ ಸ್ಥಾಪನೆ, ಹೊಸ ಕೆಎಸ್ ಆಟ್ ಟಿಸಿ ಡಿಪೋ ಮತ್ತು ಬಸ್ ನಿಲ್ದಾಣ, ನರ್ಮ್ ಬಸ್ ಆರಂಭ, ಕೃಷಿ ಡಿಪ್ಲೊಮಾ ಕಾಲೇಜು ಸ್ಥಾಪನೆ, ಹೊಸ ಆಂಬ್ಯುಲೆನ್ಸ್ ಮತ್ತು ಹೆಚ್ಚುವರಿ ಫೈರ್ ಇಂಜಿನ್ ವ್ಯವಸ್ಥೆ ಇತ್ಯಾದಿ ಹತ್ತು ಹಲವು ಜನಪರ ಕಾರ್ಯಗಳ ಕ್ರೀಯಾ ಯೋಜನೆ ಮತ್ತು ಅನುಷ್ಠಾನಕ್ಕೆ ನಿರಂತರ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
`ಸರಕಾರದ ಹತ್ತು ಹಲವು ಸವಲತ್ತು ಪಡೆಯಲು ಸಹಾಯವಾಗುವ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿ ಇಂದು ಆಯುಷ್ಮಾನ್ ಕಾರ್ಡ್ ನಂಥ ಸವಲತ್ತು ಪಡೆಯಲು ಅಂದು ನಾನು ಕ್ರಮ ವಹಿಸಿದ್ದೇನು ಎಂಬುದಕ್ಕೆ ನನಗೆ ಹೆಮ್ಮೆಯಿದೆ.
ಗುದ್ದಲಿ ಪೂಜೆ ಜನಪ್ರತಿನಿಧಿ ಎಂದು ಹೀಯಾಳಿಸಿ ಟೀಕೆ ಮಾಡಿದ ಜನರೆದುರು ನಿಂತ ನನ್ನ ಕನಸಿನ ಹಲವು ಯೋಜನೆಗಳಲ್ಲಿ ಉಪ್ಪೂರು ಗ್ರಾಮದಲ್ಲಿ ಸ್ಥಾಪಿಸಿದ ಸರಕಾರಿ ಜಿಟಿಟಿಸಿ ಕಾಲೇಜು ಕೂಡಾ ಒಂದು. ಅದು ಸಂಪೂರ್ಣ ಉಚಿತವಾಗಿದ್ದು ಉದ್ಯೋಗಾಧಾರಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!