Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನಾರ್ತ್ ಶಾಲೆಗೆ ಕೊಡುಗೆ

ನಾರ್ತ್ ಶಾಲೆಗೆ ಕೊಡುಗೆ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ನಾರ್ತ್ ಶಾಲೆಗೆ ಕೊಡುಗೆ
ಉಡುಪಿ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಉಡುಪಿ ನಾರ್ತ್ ಶಾಲೆ) ಗೆ ಯೂನಿಯನ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯಿಂದ ಕೊಡುಗೆಯಾಗಿ ನೀಡಲಾದ ಸುಮಾರು 2 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಕಚೇರಿ ಮಹಾಪ್ರಬಂಧಕ ಡಾ. ರವೀಂದ್ರ ಬಾಬು, ನಮ್ಮ ಬ್ಯಾಂಕ್ ಕೇವಲ ವ್ಯಾವಹಾರಿಕವಾಗಿ ಕಾರ್ಯನಿರ್ವಹಿಸದೇ ಸಾಮಾಜಿಕ ಜವಾಬ್ದಾರಿಯನ್ನೂ ಪಾಲಿಸುತ್ತಿದೆ.

ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಿಠೋಪಕರಣಗಳನ್ನು ನೀಡಲಾಗಿದೆ ಎಂದರು.

ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿ ಉಪ ಮಹಾಪ್ರಬಂಧಕ ಡಾ. ಎಚ್.ಟಿ. ವಾಸಪ್ಪ, ಸಹಾಯಕ ಮಹಾಪ್ರಬಂಧಕಿ ರೋಶ್ಲಿನ್ ರಾಡ್ರಿಗಸ್, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಪಿ. ವಿ. ಭಂಡಾರಿ, ಉಪಾಧ್ಯಕ್ಷ ಸೈಯ್ಯದ್ ಸಿರಾಜ್ ಅಹ್ಮದ್, ಕೋಶಾಧಿಕಾರಿ ಇಕ್ಬಾಲ್ ಮನ್ನಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಿ. ಸ್ವಾಗತಿಸಿದರು. ಶಿಕ್ಷಕಿಯರಾದ ಶೋಭಾ ಶೆಟ್ಟಿ ನಿರೂಪಿಸಿ, ರೇಣುಕಾ ಆಚಾರ್ಯ ವಂದಿಸಿದರು.

ಬ್ಯಾಂಕಿನಿಂದ ಡೆಸ್ಕ್, ಬೆಂಚ್, ಬಟ್ಟಲು ಸ್ಟಾಂಡ್, ಬಟ್ಟಲು, ಲೋಟಗಳನ್ನು ಶಾಲೆಗೆ ನೀಡಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!