Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ನಿರಂತರ ಕಲಿಕೆ ಕಾರ್ಯಕ್ರಮ

ನಿರಂತರ ಕಲಿಕೆ ಕಾರ್ಯಕ್ರಮ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯ ವೃತ್ತಿಪರ ವೈದ್ಯರು ಮತ್ತು ಬೋಧಕ ವೈದ್ಯರಿಗೆ ನಿರಂತರ ಕಲಿಕೆ (ಕೆಎಚ್ ಲರ್ನ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಉಪಕುಲಪತಿ ಲೆ| ಜ| (ಡಾ) ಎಂ. ಡಿ. ವೆಂಕಟೇಶ್ ಉದ್ಘಾಟಿಸಿದರು.

ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಪರ ವೈದ್ಯರು ಮತ್ತು ಬೋಧಕ ವೈದ್ಯರಿಗೆ ಜ್ಞಾನ ವೃದ್ಧಿಗೆ ಇದು ಪೂರಕ ಎಂದರು. ಶಿಕ್ಷಣ ಕ್ಷೇತ್ರದ ನಾಲ್ಕು ಪ್ರಮುಖ ಅಂಶಗಳಾದ ಶಿಕ್ಷಕರಿಂದ ಕಲಿಯುವುದು, ಸ್ವಕಲಿಕೆ, ಜೊತೆಗಾರರಿಂದ ಕಲಿಕೆ ಮತ್ತು ಜೀವನ ಪರ್ಯಂತ ಕಲಿಕೆ ಇಂಥ ಕಾರ್ಯಕ್ರಮದಿಂದ ಸಾಧ್ಯ ಎಂದರು.

ಅಭ್ಯಾಗತರಾಗಿದ್ದ ಮಾಹೆ ಆರೋಗ್ಯ ವಿಜ್ಞಾನ ವಿಭಾಗ ಸಹ ಕುಲಪತಿ ಡಾ. ಪಿ. ಎಲ್. ಎನ್. ಜಿ. ರಾವ್, ಪ್ರತೀ 3 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಜ್ಞಾನ ದ್ವಿಗುಣಗೊಳ್ಳುತ್ತದೆ. ಯಾರಿಗೂ ಜ್ಞಾನದ ವೇಗ ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಕಲಿಕೆ ಕಾರ್ಯಕ್ರಮ ಹೊಸ ಹೊಸ ವಿಚಾರ ಹಂಚಿಕೊಳ್ಳಲು ಮತ್ತು ಕಲಿಯಲು ಸೂಕ್ತ ವೇದಿಕೆ ಎಂದರು.

ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಕಸ್ತೂರ್ಬಾ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ, ಡಾ. ಅನಿಲ್ ಕೆ. ಭಟ್, ಡಾ. ಕೃಷ್ಣಾನಂದ ಪ್ರಭು ಇದ್ದರು.

ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಸ್ವಾಗತಿಸಿ, ಸಹ ವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ ವಂದಿಸಿದರು. ಡಾ. ನಿಖಿತಾ ನಿರೂಪಿಸಿದರು.

ಶಸ್ತ್ರಚಿಕಿತ್ಸಾ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ. ನವೀನ್ ಕುಮಾರ್ ಎ. ಎನ್. ತಮ್ಮ ವಿಭಾಗ ನಡೆಸುತ್ತಿರುವ ಅಪೂರ್ವ ಶಸ್ತ್ರಚಿಕಿತ್ಸೆಗಳ ಮಾಹಿತಿ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!