ಸುದ್ದಿಕಿರಣ ವರದಿ
ಸೋಮವಾರ, ಫೆಬ್ರವರಿ 14
ಉಚ್ಛ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು
ಬೆಂಗಳೂರು: ಉಚ್ಛ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಸೋಮವಾರ ಕಲಾಪ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು 10ನೇ ತರಗತಿಯ ವರೆಗೆ ಶಾಲೆಗಳು ಪ್ರಾರಂಭವಾಗಿದ್ದು ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಪ್ರಕರಣಗಳು ವರದಿಯಾಗಿವೆ. ನೂನತೆಗಳನ್ನು ಸರಿಪಡಿಸುವ ಕುರಿತು ಹಾಗೂ ಎಸ್.ಒ.ಪಿಗಳ ಬಗ್ಗೆ ಸಭೆ ಕರೆದು ಚರ್ಚಿಸಲಾಗುವುದು.
ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವ ಹೊಣೆಗಾರಿಕೆ ಶಾಲಾಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪೋಷಕರ ಮೇಲಿದೆ.
ಶಾಂತಿಯುತ ವಾತಾವರಣದಲ್ಲಿ ಅಂತಿಮ ತೀರ್ಪು ನೀಡಲು ಸಾಧ್ಯವಾಗಲಿದೆ. ಅಲ್ಲಿಯ ವರೆಗೆ ನಾವು ನಿಯಂತ್ರಣದಲ್ಲಿರಬೇಕು ಎಂದರ