Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಪಡುಕೊಣಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ದಿನಾಚರಣೆ

ಪಡುಕೊಣಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ದಿನಾಚರಣೆ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಪಡುಕೊಣಾಜೆ ಸರ್ಕಾರಿ ಪ್ರೌಢಶಾಲೆಯ ಗ್ರಾಹಕ ಸಂಘ ವತಿಯಿಂದ ವಿಶ್ವ ಗ್ರಾಹಕ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಯಿತು.

ಗ್ರಾಹಕ ಜಾಗೃತಿಗೆ ಸಂಬಂಧಿಸಿದಂತೆ ಭಾಷಣ, ಪ್ರಬಂಧ, ಘೋಷವಾಕ್ಯ ರಚನೆ, ರಸಪ್ರಶ್ನೆ, ಚಿತ್ರಕಲೆ ಇತ್ಯಾದಿ ಸ್ಪರ್ಧೆ ಆಯೋಜಿಸಲಾಗಿತ್ತು. ತರಗತಿವಾರು ನಡೆದ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ಗ್ರಾಹಕ- ಮಾರುಕಟ್ಟೆಯ ರಾಜ ವಿಷಯ ಕುರಿತು 10ನೇ ತರಗತಿ ವಿದ್ಯಾರ್ಥಿನಿಯರಾದ ಲಾವಣ್ಯ ಮತ್ತು ಸುಜಯಾ ಅಭಿಪ್ರಾಯ ಮಂಡಿಸಿದರು.

ರಾಜ್ಯ ಮಟ್ಟದ ಸಂಪನ್ಮೂಲವ್ಯಕ್ತಿ, ದ. ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟ ಜೊತೆ ಕಾರ್ಯದರ್ಶಿ, ಶಿಕ್ಷಕ ರಾಯಿ ರಾಜಕುಮಾರ್ ಗ್ರಾಹಕ ಹಿತ ರಕ್ಷಣಾ ಕಾಯ್ದೆ, ಮಧ್ಯವರ್ತಿಗಳ ಹಾವಳಿ, ಮಾರುಕಟ್ಟೆಯಲ್ಲಿ ಮೋಸ ಹೋಗುವ ಹಲವಾರು ಸಂದರ್ಭಗಳು, ಗ್ರಾಹಕ ರಕ್ಷಣಾ ವೇದಿಕೆಯಿಂದ ಪಡೆಯಬಹುದಾದ ಅನುಕೂಲತೆ, ಸಕಾಲ ಇತ್ಯಾದಿ ವಿಷಯ ಕುರಿತು ವಿವರವಾಗಿ ತಿಳಿಸಿದರು.

ಸ್ವತಃ ವಿದ್ಯಾರ್ಥಿಗಳು ಗ್ರಾಹಕ ಜಾಗೃತಿ ಮೂಡಿಸುವ ಬಗೆ ವಿವರಿಸಿದರು.

ಶಾಲಾ ಗ್ರಾಹಕ ಸಂಘದ ಸಂಯೋಜಕ ಶಿಕ್ಷಕಿ ಸುನೀತಾ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಶುಭಲಕ್ಷ್ಮಿ ಸ್ವಾಗತಿಸಿ, ಅನ್ವಿತಾ ವಂದಿಸಿದರು. ಶಿಕ್ಷಕಿಯರಾದ ಜಯಶ್ರೀ, ನಳಿನಿ ಬಿ., ಸುಚಿತ್ರಾ ಪೈ ಮತ್ತು ಮಣಿತಾ ಹಾಗೂ ಶಿಕ್ಷಕ ಸತ್ಯಶಂಕರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!