Sunday, October 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಪತಂಜಲಿ ಯೋಗಪೀಠಕ್ಕೆ ಭೇಟಿ

ಪತಂಜಲಿ ಯೋಗಪೀಠಕ್ಕೆ ಭೇಟಿ

ಸುದ್ದಿಕಿರಣ ವರದಿ

ಹರಿದ್ವಾರ, ನ. 10, 2020: ಯೋಗ ಗುರು ಬಾಬಾ ರಾಮದೇವ್ ಸಾರಥ್ಯದ ಹರಿದ್ವಾರದ ಪತಂಜಲಿ ಯೋಗ ಪೀಠಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿದರು.

ಪತಂಜಲಿ ಆಯುರ್ವೇದ ಆಸ್ಪತ್ರೆ, ಆಯುರ್ವೇದ ವನ, ಪತಂಜಲಿ ಪೀಠದ ಉತ್ಪನ್ನಗಳ ಮಳಿಗೆ ಮೊದಲಾದ ಎಲ್ಲ ವಿಭಾಗಗಳನ್ನು ಕುತೂಹಲದಿಂದ ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.
ಬಳಿಕ ಬಾಬಾ ರಾಮದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಶ್ರೀಗಳನ್ನು ಗೌರವಿಸಿದರು. ಶ್ರೀಗಳೂ ರಾಮದೇವ್ ಅವರನ್ನು ಗೌರವಿಸಿದರು.
ಡಾ. ಲಲಿತ್ ಮೋಹನ್ ಮಿಶ್ರಾ ಅವರು ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಪರಿಚಯಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!