Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ದೇವಾಲಯಗಳು ಅಧ್ಯಾತ್ಮಿಕ ಪರಂಪರೆಯ ಮಾರ್ಗಸೂಚಿ

ದೇವಾಲಯಗಳು ಅಧ್ಯಾತ್ಮಿಕ ಪರಂಪರೆಯ ಮಾರ್ಗಸೂಚಿ

ಉಡುಪಿ: ಧಾರ್ಮಿಕತೆ, ಸಂಸ್ಕಾರ, ಸಂಸ್ಕೃತಿಯ ಪರಂಪರೆಯಲ್ಲಿ ಮುನ್ನಡೆಯಲು ದೇವಾಲಯಗಳು ಮಾರ್ಗಸೂಚಿಯಂತೆ ವರ್ತಿಸಬಲ್ಲವು ಎಂದು ಕೊಡವೂರು ವಾರ್ಡ್ ನಗರಸಭಾ ಸದಸ್ಯ ವಿಜಯ ಕೊಡವೂರು ಹೇಳಿದರು.

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ 2021ರ ಫೆಬ್ರವರಿಯಲ್ಲಿ ನಡೆಯಲಿರುವ ರಾಶಿಪೂಜೆ ಅಂಗವಾಗಿ ಶ್ರೀದೇವಳದಲ್ಲಿ ನಡೆದ ಪ್ರಚಾರ ಸ್ಟಿಕರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಡವೂರು ಸಾಯಿಬಾಬಾ ಮಂದಿರ ಅಧ್ಯಕ್ಷ ದಿವಾಕರ ಶೆಟ್ಟಿ ಪ್ರಚಾರ ಸ್ಟಿಕ್ಕರ್ ಬಿಡುಗಡೆಗೊಳಿಸಿ, ಈ ಪುಣ್ಯಪ್ರದವಾದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಗರಸಭಾ ಸದಸ್ಯ ಶ್ರೀಶ ಕೊಡವೂರು ಮಾತನಾಡಿ, ದೇವಾಲಯಗಳು ಧಾರ್ಮಿಕತೆಗೆ ವಿಶೇಷ ಒತ್ತುನೀಡಿ ಕಾರ್ಯೋನ್ಮುಖವಾದರೆ ಆ ಊರಿನ ಪ್ರಗತಿಯಾಗುವುದರಲ್ಲಿ ಸಂಶಯವಿಲ್ಲ. ಮಹಾರಥೋತ್ಸವ ಹಾಗೂ ರಾಶಿಪೂಜೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಲ್ಪೆ ಮೀನು ವ್ಯಾಪರಸ್ಥರ ಸಂಘ ಅಧ್ಯಕ್ಷ ಸಾಧು ಸಾಲ್ಯಾನ್, ಕೊಡವೂರು ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಶ್ರೀನಿವಾಸ ಬಾಯರಿ, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎ. ರಾಜ ಸೇರಿಗಾರ್, ಕೆ.ಬಾಬ, ಸ್ಥಳೀಯ ಪೂರ್ವವಿದ್ಯಾರ್ಥಿ ಸಂಘ ಅಧ್ಯಕ್ಷ ಸತೀಶ್ ಕೊಡವೂರು, ಅಂಚೆ ಇಲಾಖೆ ಉದ್ಯೋಗಿ ಪೂರ್ಣಿಮಾ ಜನಾರ್ದನ್, ಸಂಧ್ಯಾ ಪ್ರಕಾಶ್, ಸರೋಜಿನಿ, ಈರಣ್ಣ ಕುರುವತ್ತಿ ಗೌಡ, ರಂಜಿತ್ ಕೊಡವೂರು, ಸುನಿಲ್ ಶೆಟ್ಟಿ ಕಂಬ್ಳಕಟ್ಟ ಮೊದಲಾದವರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಸದಸ್ಯ ಜನಾರ್ದನ ಕೊಡವೂರು ನಿರೂಪಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!