Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಅಮೃತ ಪಾಲ್ ಜಾಮೀನು ಅರ್ಜಿ ವಜಾ

ಅಮೃತ ಪಾಲ್ ಜಾಮೀನು ಅರ್ಜಿ ವಜಾ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಅಮೃತ ಪಾಲ್ ಜಾಮೀನು ಅರ್ಜಿ ವಜಾ
ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಪಿಎಸ್.ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಜೈಲು ಸೇರಿರುವ ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟಿನಿಂದ ಆದೇಶ ಹೊರಬಿದ್ದಿದೆ.

ಎಡಿಜಿಪಿ ಅಮೃತ್ ಪಾಲ್ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ, ಪಾಲ್ ಬಳಿಯಿತ್ತು. ಅದನ್ನು ಇತರ ಆರೋಪಿಗಳಿಗೆ ನೀಡಿದ್ದರು. ಇನ್ನು ಒಎಂಆರ್ ಶೀಟ್ ತಿದ್ದಿರುವುದು ಪಿಎಸ್.ಎ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಅಮೃತ್ ಪಾಲ್ ಗೆ ಜಾಮೀನು ನೀಡದಂತೆ ಸಿಐಡಿ ಪರ ಎಸ್.ಪಿಪಿ ಪ್ರಸನ್ನ ವಾದ ಮಂಡಿಸಿದರು.

ಸದ್ಯ ಸಿಐಡಿ ಪರ ವಕೀಲರ ವಾದಕ್ಕೆ ಸ್ಪಂದಿಸಿದ ನ್ಯಾಯಾಲಯ, ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!