Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪುತ್ತಿಗೆ ಶ್ರೀಗಳಿಗೆ ಗುರುವಂದನೆ

ಪುತ್ತಿಗೆ ಶ್ರೀಗಳಿಗೆ ಗುರುವಂದನೆ

ಉಡುಪಿ: ಈಚೆಗಷ್ಟೇ ಷಷ್ಠ್ಯಬ್ದಿಪೂರ್ತಿ ಸಮಾರಂಭ ಪೂರೈಸಿರುವ ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಶುಕ್ರವಾರ ಉಡುಪಿ ಪುರೋಹಿತ ಸಂಘದವರು ಗುರುವಂದನೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ವೇ|ಮೂ| ರಾಮದಾಸ ಭಟ್ಟರ ನೇತೃತ್ವದಲ್ಲಿ ಶ್ರೀಪಾದರನ್ನು ಗೌರವಿಸಲಾಯಿತು.

ಸನ್ಮಾನ
ಇದೇ ಸಂದರ್ಭದಲ್ಲಿ ಉಡುಪಿ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಕಳೆದ ಸುಮಾರು 38 ವರ್ಷಗಳಿಂದ ಅಲಂಕಾರಶಾಸ್ತ್ರದ ಉಪನ್ಯಾಸಕರಾಗಿ, ಬಳಿಕ ಪ್ರಾಚಾರ್ಯರಾಗಿ ಇದೀಗ ಸೇವಾ ನಿವೃತ್ತರಾಗಲಿರುವ ಪ್ರೊ. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ ಭಾರದ್ವಾಜ ಇದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!