Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪಣಿಯಾಡಿಯಲ್ಲಿ ಪುರಾತನ ಗುಹೆ ಪತ್ತೆ

ಪಣಿಯಾಡಿಯಲ್ಲಿ ಪುರಾತನ ಗುಹೆ ಪತ್ತೆ

ಉಡುಪಿ: ಇಲ್ಲಿನ ಪಣಿಯಾಡಿಯಲ್ಲಿ ಪುತ್ತಿಗೆ ಮಠ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಪುರಾತನ ಅನಂತಪದ್ಮನಾಭ ದೇವಳ ಕಾಮಗಾರಿ ನಡೆಸುತ್ತಿರುವಾಗ ಗುಹೆಯೊಂದು ಪತ್ತೆಯಾಗಿದೆ.

ದೇವಳದ ಪೌಳಿ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿರುವಾಗ ದೇವಳದ ಉತ್ತರ ಭಾಗದಲ್ಲಿ ನೆಲ ಮಟ್ಟದಿಂದ ಸುಮಾರು 8 ಅಡಿ ಕೆಳಗೆ ಅರ್ಧ ಗೋಳಾಕೃತಿಯ ಗುಹೆ ಕಂಡುಬಂದಿದೆ. ಗುಹೆಯ ಮೇಲ್ಮೈ ಯಲ್ಲಿ ಕಲ್ಲಿನ ಮುಚ್ಚಳವಿದ್ದಂತಿದೆ. ಗುಹೆಯ ಒಳ ಮೈ ನುಣುಪಾಗಿದ್ದು, ಅದರಲ್ಲಿ 2- 3 ಕಿಂಡಿಗಳಂತಿವೆ.

ಇದು ಹಿಂದೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದ ಸ್ಥಳ ಇದಾಗಿರಬಹುದು ಎಂದು ಊಹಿಸಲಾಗಿದೆ. ಅಧ್ಯಯನದಿಂದಷ್ಟೇ ಇನ್ನಷ್ಟು ವಿಚಾರ ತಿಳಿಯಬೇಕಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!