Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಅಮರನಾಥ ಮೇಘಸ್ಫೋಟ: ಪೇಜಾವರಶ್ರೀ ಕಳವಳ

ಅಮರನಾಥ ಮೇಘಸ್ಫೋಟ: ಪೇಜಾವರಶ್ರೀ ಕಳವಳ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ಅಮರನಾಥ ಮೇಘಸ್ಫೋಟ: ಪೇಜಾವರಶ್ರೀ ಕಳವಳ
ಉಡುಪಿ: ಹಿಮಾಲಯ ತಪ್ಪಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಮರನಾಥದ ಬಳಿ ಸಂಭವಿಸಿದ ಭೀಕರ ಮೇಘಸ್ಫೋಟ ಸೃಷ್ಟಿಸಿದ ಅವಾಂತರದ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಾಕೃತಿಕ ವಿಪತ್ತಿನಿಂದ ಅನೇಕ ಯಾತ್ರಿಗಳು ಪ್ರಾಣ ಕಳೆದುಕೊಂಡು ಇನ್ನೂ ಅನೇಕರು ನೆಲದಡಿ ಸಿಲುಕಿರುವ ಹಾಗೂ ನೂರಾರು ಮಂದಿ ಗಾಯಗೊಂಡು ಸಂತ್ರಸ್ತರಾಗಿರುವ ವರ್ತಮಾನಗಳು ತೀವ್ರ ವಿಷಾದ ವುಂಟುಮಾಡಿದೆ.

ಯಾತ್ರಿಗಳ ಸುರಕ್ಷತೆ ಮತ್ತು ಗಾಯಾಳುಗಳ ಚಿಕಿತ್ಸೆಗಾಗಿ ಭಾರತೀಯ ಸೇನಾ ಸಿಬಂದಿಗಳು ಹಗಲಿರುಳು ಶ್ರಮಿಸುತ್ತಿರುವುದನ್ನು ಶ್ಲಾಘಿಸಿದ ಶ್ರೀಗಳು, ಅವರಿಗೆ ಶ್ರೀಕೃಷ್ಣ ಮತ್ತಷ್ಟು ಶಕ್ತಿ ಚೈತನ್ಯ ಕರುಣಿಸಲಿ.

ದುರಂತದಲ್ಲಿ ಮಡಿದ ಯಾತ್ರಿಗಳಿಗೆ ಸದ್ಗತಿ, ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆಯೂ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ಸಂದೇಶದಲ್ಲಿ ತಿಳಿಸಿದ್ದಾರೆ.

ನೆರೆಹಾನಿ ಬಗ್ಗೆ ಕಳವಳ
ರಾಜ್ಯವೂ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ಉಂಟಾಗಿರುವ ಪ್ರವಾಹ ಮತ್ತು ಅಪಾರ ಪ್ರಮಾಣದ ಹಾನಿಯ ವಿಚಾರವೂ ಮನಸ್ಸಿಗೆ ತುಂಬಾ ನೋವು ತಂದಿದೆ.

ಪ್ರಕೃತಿ ನಮ್ಮ ಮೇಲೆ ಕರುಣೆ ತೋರಿ ಮತ್ತಷ್ಟು ಹಾನಿ ತಾರದಂತೆಯೂ, ಎಲ್ಲೆಡೆ ನೆಮ್ಮದಿ ಕ್ಷೇಮ ಶಾಂತಿ ನೆಲೆಗೊಳ್ಳುವಂತೆಯೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇವೆ ಎಂದೂ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!