ಸುದ್ದಿಕಿರಣ ವರದಿ
ಬುಧವಾರ, ಫೆಬ್ರವರಿ 23
ಪೇಜಾವರ ಶ್ರೀಗಳಿಗೆ ಪುಷ್ಪಾಭಿಷೇಕ
ಉಡುಪಿ: 58ನೇ ವರ್ಧಂತಿ ಅಂಗವಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಇಲ್ಲಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ಅಭಿನಂದನ ಕಾರ್ಯಕ್ರಮ ನಡೆಯಿತು.
ಶ್ರೀಪಾದರಿಗೆ ನೂರಾರು ಗಣ್ಯ ಮಹನೀಯರ ಉಪಸ್ಥಿತಿಯಲ್ಲಿ ವಿಶೇಷ ಪುಷ್ಪಾಭಿಷೇಕ ಸಹಿತ ಗುರುವಂದನೆ ಸಲ್ಲಿಸಲಾಯಿತು.
ಅನೇಕ ಮಂದಿ ಭಕ್ತರು, ಅಭಿಮಾನಿಗಳು ಆಗಮಿಸಿದ್ದರು.