Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಲು ಪ್ರಕ್ಷುಬ್ಧ: ಪ್ರವಾಸಿಗರಿಗೆ ಸೂಚನೆ

ಕಡಲು ಪ್ರಕ್ಷುಬ್ಧ: ಪ್ರವಾಸಿಗರಿಗೆ ಸೂಚನೆ

ಸುದ್ದಿಕಿರಣ ವರದಿ
ಸೋಮವಾರ, ಮೇ 9

ಕಡಲು ಪ್ರಕ್ಷುಬ್ಧ: ಪ್ರವಾಸಿಗರಿಗೆ ಸೂಚನೆ
ಉಡುಪಿ: ಪ್ರಸ್ತುತ ಉಂಟಾಗಿರುವ ಚಂಡಮಾರುತದಿಂದ ಅರಬ್ಬೀ ಸಮುದ್ರದಲ್ಲಿ ತೀವ್ರ ಗಾಳಿ ಹಾಗೂ ದೊಡ್ಡ ಅಲೆಗಳು ಉದ್ಭವಿಸಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಪಾಯಕಾರಿಯಾಗಿದೆ. ಆದ್ದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು.

ಪ್ರವಾಸಿ ಬೋಟ್ ಮಾಲೀಕರು ಬೀಚ್ ಪ್ರದೇಶದಲ್ಲಿ ನಡೆಸಲಾಗುವ ಜಲಕ್ರೀಡೆ ಬೋಟ್ ಚಟುವಟಿಕೆ ಹಾಗೂ ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರಯಾಣಿಸುವ ಎಲ್ಲಾ ಪ್ರವಾಸಿ ಬೋಟ್ ಗಳನ್ನು ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಾ| ಉದಯ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!