Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರತಿಯೊಬ್ಬರ ಸೇವೆಯೂ ಶ್ರೇಷ್ಠ

ಪ್ರತಿಯೊಬ್ಬರ ಸೇವೆಯೂ ಶ್ರೇಷ್ಠ

ಶಿರ್ವ: ಯಾವುದೇ ಒಂದು ಸಂಸ್ಥೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಸೇವೆಯೂ ಅತ್ಯಂತ ಅಮೂಲ್ಯ ಹಾಗೂ ಉಪಯುಕ್ತವಾದುದು. ವರ್ಗವಾರು ಕರ್ತವ್ಯ ಜವಾಬ್ದಾರಿಯ ಹಿನ್ನೆಲೆಯಲ್ಲಿದ್ದರೂ ಪ್ರತಿಯೊಬ್ಬರ ಸೇವೆಯೂ ಪರಿಗಣಿತ ಹಾಗೂ ಶ್ರೇಷ್ಠವಾದುದು ಎಂದು ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕ ವಂ| ಡೆನ್ನಿಸ್ ಡೇಸಾ ಹೇಳಿದರು.

ಸೇವಾ ನಿವೃತ್ತರಾದ ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಸಿಬ್ಬಂದಿ ಅಲ್ವಿರಾ ಕ್ಲೇರೆನ್ಸ್ ಫೆರ್ನಾಂಡಿಸ್ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ| ಹೆರಾಲ್ಡ್ ಮೋನಿಸ್ ಸ್ವಾಗತಿಸಿದರು. ಆಡಳಿತ ಮಂಡಳಿ ಪರವಾಗಿ ಡೊರಿನ್ ಹಾಗೂ ಅಧ್ಯಾಪಕ ವೃಂದದ ಪರವಾಗಿ ರೀಮಾ ಲೋಬೊ ಅನಿಸಿಕೆ ವ್ಯಕ್ತಪಡಿಸಿದರು. ಲಾರೆನ್ಸ್ ಸನ್ಮಾನಪತ್ರ ವಾಚಿಸಿದರು.

ಕಾಲೇಜು ಮತ್ತು ಆಡಳಿತ ಮಂಡಳಿ ವತಿಯಿಂದ ಅಲ್ವಿರಾ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ನಿರ್ದೇಶಕಿ ಯಶೋದಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಇದ್ದರು.

ತನೂಜ, ದಿವ್ಯಶ್ರೀ, ಪದ್ಮಾಸಿನಿ ಸಹಕರಿಸಿದರು. ಫ್ಲೋರಿನ್ ವಂದಿಸಿದರು. ಶರ್ಮಿಳ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!