Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಾಕೃತಿಕ ವಿಕೋಪ ಪರಿಹಾರಧನ ವಿತರಣೆ

ಪ್ರಾಕೃತಿಕ ವಿಕೋಪ ಪರಿಹಾರಧನ ವಿತರಣೆ

ಉಡುಪಿ: ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 3 ಕುಟುಂಬಗಳಿಗೆ ಶಾಸಕ ಕೆ. ರಘುಪತಿ ಭಟ್ ಶಿಫಾರಸಿನ ಮೇರೆಗೆ ಮಂಜೂರಾದ 97,305 ರೂ. ಮೊತ್ತದ ಚೆಕ್ ನ್ನು ಶನಿವಾರ ಶಾಸಕ ಭಟ್ ಫಲಾನುಭವಿಗಳಿಗೆ ವಿತರಿಸಿದರು.

ಕೆಂಜೂರು ಗ್ರಾಮದ ಬುಡ್ಡು ಹಾಂಡ್ತಿ ಅವರಿಗೆ 52,305 ರೂ., ಕುದಿ ಗ್ರಾಮದ ವಿಜಯ ಅವರಿಗೆ 15 ಸಾವಿರ ರೂ. ಹಾಗೂ ಪೆಜಮಂಗೂರು ಗ್ರಾಮದ ಕೆ. ಜಯಲಕ್ಷ್ಮಿಬಾಯಿ ಅವರಿಗೆ 30 ಸಾವಿರ ರೂ. ಮೊತ್ತದ ಚೆಕ್ ಸೇರಿದಂತೆ ಒಟ್ಟು ರೂ. 97,305/ ರೂ. ವಿತರಿಸಲಾಯಿತು.

ಕಳ್ತೂರು ಗ್ರಾ. ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷ ನವೀನ್ ಪೂಜಾರಿ, ಪಂಚಾಯತ್ ಸದಸ್ಯರಾದ ಆದರ್ಶ ಶೆಟ್ಟಿ, ದಿನೇಶ್ ಶೆಟ್ಟಿ ಮತ್ತು ರಮಾನಂದ ಶೆಟ್ಟಿ ಹಾಗೂ ಗ್ರಾಮಲೆಕ್ಕಾಧಿಕಾರಿ ರಾಘವೇಂದ್ರ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!