Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಾಣಯೋಗ ತರಬೇತಿ

ಪ್ರಾಣಯೋಗ ತರಬೇತಿ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಸಂಯುಕ್ತಾಶ್ರಯದಲ್ಲಿ ಕೃಷ್ಣಮಠ ಮಧ್ವಾಂಗಣದಲ್ಲಿ ನಡೆಸಲುದ್ದೇಶಿಸಿದ ಪ್ರಾಣಯೋಗ ಉಚಿತ ತರಬೇತಿಯನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಎಲ್ಲರೂ ನಿತ್ಯವೂ ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮನಸಿನ ಹತೋಟಿ, ಕಾಯಿಲೆಗಳ ನಿಯಂತ್ರಣ, ಒತ್ತಡ ಮತ್ತು ಅಶಾಂತಿಯಿಂದ ಮುಕ್ತಿ ಪಡೆಯಲು ಸಾಧ್ಯ. ಉತ್ತಮ ಆರೋಗ್ಯಕ್ಕಾಗಿ ಯೋಗದ ಜೊತೆ ಪ್ರಾಣಾಯಾಮವನ್ನೂ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪತಂಜಲಿ ಯೋಗ ಸಮಿತಿಯ ವಿಶ್ವನಾಥ ಭಟ್, ಲೀಲಾ ಅಮೀನ್, ಜಗದೀಶ್ ಇದ್ದರು.

ಯೋಗ ಗುರು ಬೇರೊಳ್ಳಿ ನಾಗರಾಜ ಶೇಟ್ ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಯೋಗ ತರಬೇತಿ ನೀಡಿದರು.

ಶಿಬಿರ ಪ್ರತಿದಿನ ಬೆಳಿಗ್ಗೆ 5.45ರಿಂದ 7ರ ವರೆಗೆ ನಡೆಯಲಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!