ಉಡುಪಿ: ಲಾಕ್ ಡೌನ್ ನಿಂದಾಗಿ ಬೀದಿ ನಾಯಿಗಳೂ ಸೇರಿದಂತೆ ವಿವಿಧ ಪ್ರಾಣಿಗಳು ಹಾಗೂ ಪಕ್ಷಿಗಳು ಅನ್ನ ನೀರು ಇಲ್ಲದೆ ಬವಣೆ ಪಡುತ್ತಿದ್ದು, ಅವುಗಳಿಗೂ ಅನ್ನ ನೀಡುವಂತೆ ಪ್ರಾಣಿ ದಯಾ ಸಂಘ ಸದಸ್ಯ ವಾಸುದೇವ ಬನ್ನಂಜೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಳೆದ ವರ್ಷ ಕೊರೊನಾದಿಂದಾಗಿ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿನಿತ್ಯ ನಾಯಿಗಳಿಗೆ ವಾಸುದೇವ ಬನ್ನಂಜೆ ಮತ್ತು ಸಂಗಡಿಗರು ಆಹಾರ ನೀಡಿದ್ದರು. ಈ ಬಾರಿಯೂ ನಿರ್ಬಂಧ ಹಿನ್ನೆಲೆಯಲ್ಲಿ ವಾಸುದೇವ ಬನ್ನಂಜೆ ಜೊತೆ ದತ್ತಾತ್ರೇಯ ಬನ್ನಂಜೆ, ಸಂದೇಶ ಬನ್ನಂಜೆ, ಹಾಲೇಶ್ ಕೊಡಂಕೂರು, ಶಬರೀಶ್ ಕೊಡಂಕೂರು, ವಿಜಯ ಆಹಾರ ನೀಡಿದರು.
ಎಲ್ಲರೂ ಅವರವರ ಮನೆ ಎದುರು ದನ, ನಾಯಿ, ಪ್ರಾಣಿ ಪಕ್ಷಿಗಳಿಗೆ ಪಾತ್ರೆಯಲ್ಲಿ ನೀರು ಮತ್ತು ಆಹಾರ ನೀಡುವಂತೆ ವಿನಂತಿಸಿದ್ದಾರೆ.