Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಬಾಗಿನ ಸಲ್ಲಿಸಿದ ಸಿಎಂ

ಬಾಗಿನ ಸಲ್ಲಿಸಿದ ಸಿಎಂ

ಸುದ್ದಿಕಿರಣ ವರದಿ
ಬುಧವಾರ, ಜುಲೈ 20

ಬಾಗಿನ ಸಲ್ಲಿಸಿದ ಸಿಎಂ
ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಕೆಆರ್.ಎಸ್ ಮತ್ತು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಅದಕ್ಕೂ ಮುನ್ನ ನಾಡದೇವತೆ ತಾಯಿ ಚಾಮುಂಡೇಶ್ವರಿ ವಾರ್ಷಿಕ ಮಹೋತ್ಸವ ಅಂಗವಾಗಿ ಸಪತ್ನೀಕರಾಗಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕನ್ನಡ ನಾಡಿಗೆ ಸುಭಿಕ್ಷೆ ನೀಡಲಿ. ಅಭಿವೃದ್ಧಿ, ಸಮೃದ್ಧಿ ನೀಡಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಅದ್ದೂರಿ ದಸರಾ
ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳ ಕಾಲ ಮೈಸೂರು ದಸರಾವನ್ನು ಕೇವಲ ಸಾಂಪ್ರದಾಯಿಕವಾಗಿ ಆಚರಿಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ದಸರಾವನ್ನು ಹಳೆ ಪದ್ಧತಿಯೊಂದಿಗೆ ಹೊಸ ಆಕರ್ಷಣೆಗಳನ್ನು ಸೇರ್ಪಡೆ ಮಾಡುತ್ತೇವೆ. ವಸ್ತು ಪ್ರದರ್ಶನವನ್ನು ಈ ಬಾರಿ ದಸರಾ ಆರಂಭಕ್ಕೆ 15 ದಿನ ಮೊದಲೇ ಆರಂಭಿಸುತ್ತೇವೆ. ಹೆಚ್ಚಿನ ಜನರನ್ನು ಆಕರ್ಷಿಸಲು ಅಂತಾರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಸಿದ್ಧಪಡಿಸುವುದಾಗಿ ತಿಳಿಸಿದರು.

ಮೈಸೂರು ಟೂರಿಸಂ ಸೆಂಟರ್ ಆದೇಶ
ಇನ್ನು 10 ದಿನಗಳೊಳಗೆ ಸರ್ಕಾರ, ಮೈಸೂರು ಟೂರಿಸಂ ಸೆಂಟರ್ ಆದೇಶ ಹೊರಡಿಸಲಿದೆ. ಒಟ್ಟಾರೆ ಅದ್ದೂರಿಯಾಗಿ ಈ ಬಾರಿ ಮೈಸೂರು ದಸರಾವನ್ನು ಆಯೋಜಿಸಲಾಗುವುದು.

ಈ ಬಾರಿ ದಸರಾ ಉದ್ಘಾಟಕರ ಬಗ್ಗೆ ಎಲ್ಲರಲ್ಲಿಯೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!