ಉಡುಪಿ: ಎಪಿಎಂಸಿ ಕಾನೂನಿನ ಮೂಲಕ ರೈತ ವಿರೋಧಿ ಕಾನೂನು ತಂದು ಕೇಂದ್ರದಲ್ಲಿ ಬಿಜೆಪಿ ಸರಕಾರ ರೈತರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಇತ್ತ ರಾಜ್ಯದಲ್ಲೂ ಬಿಜೆಪಿ ಸರಕಾರಕ್ಕೆ ರೈತರ ಪರ ಯಾವುದೇ ಕರುಣೆ ಇಲ್ಲ. ಸ್ವತ: ಕೃಷಿ ಸಚಿವ ಬಿ. ಸಿ. ಪಾಟೀಲ್, ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳುವ ಮೂಲಕ ಅಹಂಕಾರ ಮೆರೆದಿದ್ದಾರೆ. ಈ ದೇಶದ ಬೆನ್ನೆಲುಬಾದ ರೈತನಿಗೆ ಬಿಜೆಪಿ ಸರಕಾರ ತನ್ನ ದೌಲತ್ತು ತೋರಿಸುವ ಮೂಲಕ ಅಹಂಕಾರ ಮೆರೆಯುತ್ತಿದೆ ಎಂದು ಉಡುಪಿ ನಗರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓರ್ವ ಕೃಷಿ ಸಚಿವನಾಗಿ ಕೃಷಿಕರ ಬಗ್ಗೆ ಈ ರೀತಿ ಮಾತನಾಡುವುದು ಪಾಟೀಲ್ ಅವರಿಗೆ ಶೋಭೆ ತರುವುದಿಲ್ಲ. ರೈತರ ಪರ ಕಿಂಚಿತ್ತೂ ಕಾಳಜಿ ಇಲ್ಲದ ಬಿಜೆಪಿ ಸರಕಾರದಲ್ಲಿ ಕೃಷಿ ಸಚಿವರ ಹೇಳಿಕೆ ಬಿಜೆಪಿ ಸರಕಾರ ರೈತರ ಪರ ಯಾವ ಧೋರಣೆ ಹೊಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಚನ್, ಇಂಥ ಹೇಳಿಕೆ ನೀಡಿರುವ ಸಚಿವ ಬಿ. ಸಿ. ಪಾಟೀಲ್ ಕೂಡಲೇ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಆಡಳಿತದ ಅಹಂಕಾರದ ಪರಮಾವಧಿ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...