Friday, January 28, 2022
Home ಸಮಾಚಾರ ಜಿಲ್ಲಾ ಸುದ್ದಿ ಬಿಜ್ಜವಳ್ಳಿ ಘಟನೆಗೆ ಪೇಜಾವರಶ್ರೀ ಖೇದ

ಬಿಜ್ಜವಳ್ಳಿ ಘಟನೆಗೆ ಪೇಜಾವರಶ್ರೀ ಖೇದ

ಬಿಜ್ಜವಳ್ಳಿ ಘಟನೆಗೆ ಪೇಜಾವರಶ್ರೀ ಖೇದ

ಉಡುಪಿ, ಡಿ. 1 (ಸುದ್ದಿಕಿರಣ ವರದಿ): ತೀರ್ಥಹಳ್ಳಿ ಬಳಿಯ ಬಿಜ್ಜವಳ್ಳಿ ಸಮೀಪ ಅಕ್ರಮ ಗೋಸಾಗಾಟ ತಡೆಯಲೆತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ವಾಹನ ಚಲಾಯಿಸಿ ಮಾರಣಾಂತಿಕ ದುಷ್ಕೃತ್ಯ ನಡೆಸಿರುವ ಘಟನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಿಜಕ್ಕೂ ಖಂಡನೀಯ. ಗೋರಕ್ಷಣೆ ಕಾರ್ಯಕ್ಕೆ ಈ ರೀತಿ ಸವಾಲೆಸೆಯುವ ದುರುಳರ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು.

ಗೋಹತ್ಯಾ ನಿಷೇಧ ಕಾನೂನು ಕೇವಲ ಜಾರಿಗೆ ತಂದು ಪ್ರಯೋಜನವಿಲ್ಲ. ಅದರ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಸರ್ಕಾರಗಳು ಈ ಬಗ್ಗೆ ಪೂರ್ಣ ಇಚ್ಛಾಶಕ್ತಿ ತೋರಬೇಕು. ಈಚಿನ ದಿನಗಳಲ್ಲಂತೂ ಗೋಹತ್ಯೆ, ಗೋಸಾಗಾಟ ಯಾವುದೇ ಮುಲಾಜಿಲ್ಲದೇ ನಡೆಯುತ್ತಿರುವುದು ತೀರಾ ಆತಂಕಕಾರಿಯಾಗಿದೆ. ಗೋ ಸಂಕುಲ ಉಳಿಸಲು ಇಡೀ ಸಮಾಜ ಕಂಕಣಬದ್ಧರಾಗಲೇಬೇಕು. ಬೀಡಾಡಿ ದನಗಳನ್ನು ರಕ್ಷಿಸಲು ಸರ್ಕಾರ ತುರ್ತಾಗಿ ಮುಂದಾಗಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ಬಿಜ್ಜವಳ್ಳಿ ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದಿರುವ ಶ್ರೀಪಾದರು, ಈ ಕಾರ್ಯಕರ್ತರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!