Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವೈಚಾರಿಕ ಸಾಹಿತಿ ಭಾಸ್ಕರ ಮಯ್ಯ ಇನ್ನಿಲ್ಲ

ವೈಚಾರಿಕ ಸಾಹಿತಿ ಭಾಸ್ಕರ ಮಯ್ಯ ಇನ್ನಿಲ್ಲ

ಉಡುಪಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ವೈಚಾರಿಕ ಸಾಹಿತಿ ಪ್ರೊ. ಡಾ| ಭಾಸ್ಕರ ಮಯ್ಯ ಗುರುವಾರ ಮುಂಜಾನೆ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕೊರೊನಾ ಪೀಡಿತರಾಗಿ ಕಳೆದ 4 ದಿನಗಳಿಂದ ಸಾಲಿಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.

ಹಿಂದಿ ಸಾಹಿತ್ಯ ಅಧ್ಯಯನದ ಮೇರು ವ್ಯಕ್ತಿಯಾಗಿದ್ದ ಡಾ| ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ದೀರ್ಘ ಕಾಲ ಕುಂದಾಪುರ ಭಂಡಾರ್ಕಾರ್ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿದ್ದರು.

ವೈಚಾರಿಕ ಹಾಗೂ ಪ್ರಗತಿಪರ ಪ್ರಕಾರದಲ್ಲಿ 50ಕ್ಕೂ ಹೆಚ್ಚು ಪುಸ್ತಕ ರಚಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!