Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಂಗಳೂರು ಡೇರಿಗೆ ಭೇಟಿ

ಮಂಗಳೂರು ಡೇರಿಗೆ ಭೇಟಿ

ಮಂಗಳೂರು ಡೇರಿಗೆ ಭೇಟಿ

ಉಡುಪಿ, ಡಿ 6 (ಸುದ್ದಿಕಿರಣ ವರದಿ): ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಎಸ್.ಡಬ್ಲ್ಯೂ. ವಿಭಾಗದ ಶೈಕ್ಷಣಿಕ ಅಧ್ಯಯನ ಭೇಟಿ ಪ್ರಯುಕ್ತ ಮಂಗಳೂರಿನ ಕುಲಶೇಖರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಂಗಳೂರು ಡೇರಿ ಘಟಕಕ್ಕೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಹೇಶ್ ಅವರು ಉತ್ಪಾದನಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಂಗಳೂರಿನ ಡೀಡ್ಸ್ ಸರ್ಕಾರೇತರ ಸಂಸ್ಥೆಗೆ ಭೇಟಿ ನೀಡಲಾಯಿತು. ಸಂಸ್ಥೆ ಮುಖ್ಯಸ್ಥ ಮರ್ಲಿನ್ ಮಾರ್ಟಿಸ್ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಫಾದರ್ ಮುಲ್ಲರ್ ಆಸ್ಪತ್ರೆಯ ಸೈಕಿಯಾಟ್ರಿ ವಿಭಾಗಕ್ಕೆ ಭೇಟಿ ನೀಡಲಾಯಿತು. ಸಂಸ್ಥೆಯ ಝೀಟಾ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿಭಾಗದ ಸಹಾಯಕ ಪ್ರಾಧ್ಯಾಕಿ ಸುಷ್ಮಾ ಟಿ., ವಿಭಾಗದ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಜಿ. ನಾಯಕ್ ಮತ್ತು ಶ್ರೀಕಲಾ ಕುಮಾರಿ ಹಾಗೂ ವಿದ್ಯಾರ್ಥಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!