ಸುದ್ದಿಕಿರಣ ವರದಿ
ಸೋಮವಾರ, ಜುಲೈ 11
ಮಂತ್ರಾಲಯ ಶ್ರೀಗಳಿಗೆ ಅಭಿವಂದನೆ
ಬೆಂಗಳೂರು: ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಮಠಾಧೀಶ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ 50ನೇ ಜನ್ಮವರ್ಧಂತಿ ಅಂಗವಾಗಿ ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸೋಮವಾರ ಪೇಜಾವರ ಮಠ ವತಿಯಿಂದ ಅಭಿವಂದನ ಸಮಾರಂಭ ಏರ್ಪಡಿಸಲಾಯಿತು.
ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಲಾಯಿತು.
ಮಂತ್ರಾಲಯ ಕ್ಷೇತ್ರವನ್ನು ಅತ್ಯಂತ ಭಕ್ತಸ್ನೇಹಿಯನ್ನಾಗಿಸಲು ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸುತ್ತಿರುವುದನ್ನು ಪೇಜಾವರ ಶ್ರೀಗಳು ಶ್ಲಾಘಿಸಿದರು.
ವಿದ್ವಾನ್ ರಾಮವಿಠಲಾಚಾರ್ಯ ಅಭಿವಂದನ ಭಾಷಷಣಗೈದರು. ವಿದ್ಯಾಪೀಠದ ವಿದ್ವಾಂಸರು, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು, ಭಕ್ತರು ಭಾಗವಹಿಸಿದ್ದರು.