Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಉಡುಪಿ: ಜಮಾತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಗುಳಿಬೆಟ್ಟು ಅಶೋಕ್ ಭಂಡಾರಿ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಸೋಮವಾರ ಕೀಲಿಕೈ ನೀಡುವ ಮೂಲಕ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಅಧ್ಯಕ್ಷೆ ಜಮೀಲಾ ಸದೀದಾ ಹಸ್ತಾಂತರಿಸಿದರು.

ಕಳೆದ ಕೆಲವು ವರ್ಷದಿಂದ ತೋನ್ಸೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಸೂರಿಲ್ಲದವರನ್ನು ಗುರುತಿಸಿ ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಹೂಡೆ ನಿರತವಾಗಿದ್ದು, ಈ ಸರಣಿಯ 18ನೇ ಮನೆಯ ಇದಾಗಿದೆ.

ಈ ಸಂದರ್ಭದಲ್ಲಿ ತೋನ್ಸೆ ಗ್ರಾ. ಪಂ. ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಪಿ.ಡಿ.ಓ. ಕಮಲಾ, ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ, ಪಂಚಾಯತ್ ಸದಸ್ಯರಾದ ಪ್ರಶಾಂತ್ ಮತ್ತು ಸಂಧ್ಯಾ, ಮಾಜಿ ಸದಸ್ಯೆ ಸರೋಜಾ, ಪಂಚಾಯತ್ ಕಾರ್ಯದರ್ಶಿ ದಿನಕರ ಬೆಂಗ್ರೆ, ರಾಮಪ್ಪ ಮಾಸ್ತರ್ ಇದ್ದರು.

ಜಮಾತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಫೌಝಿಯಾ ಸಾದಿಕ್, ಇದ್ರಿಸ್ ಹೂಡೆ, ವಿಜಯ, ಸುಜಾನ್, ಪುರಂದರ, ಡಾ. ಫಹೀಮ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!