ಉಡುಪಿ: ಇಳೆಗೆ ಬೀಳುವ ಹನಿ ಹನಿ ನೀರನ್ನೂ ಉಳಿಸಬೇಕು. ಅದಕ್ಕಾಗಿ ಪ್ರತೀ ಮನೆ ಮನೆಯಲ್ಲೂ ಮಳೆ ನೀರು ಕೊಯ್ಲು ಅಗತ್ಯ ಎಂದು ಜಿ. ಪಂ. ಸಿಇಓ ಡಾ. ನವೀನ ಭಟ್ ಸಲಹೆ ನೀಡಿದರು.
ಕಲ್ಯಾಣಪುರ ಗ್ರಾ. ಪಂ.ನಲ್ಲಿ ನಡೆದ ಮಳೆ ನೀರಿನೊಂದಿಗೆ ಅನುಸಂಧಾನ ಕಾರ್ಯಕ್ರಮದಲ್ಲಿ ಮಳೆ ನೀರು ಕೊಯ್ಲು ಘಟಕ ಉದ್ಘಾಟಿಸಿ ಮಾತನಾಡಿದರು.
ಮಳೆ ಬರುವ ಮೊದಲೇ ಅದಕ್ಕಾಗಿ ಸಿದ್ಧತೆ ನಡೆಯಬೇಕು. ನೀರನ್ನು ಸಂಗ್ರಹಿಸಿ ಮತ್ತೆ ಮಣ್ಣೊಳಗೆ ಇಂಗಿಸಿದಾಗ ಮಾತ್ರ ನೀರಿನ ಸಮಸ್ಯೆಯಿಂದ ಮುಕ್ತಿ ಸಾಧ್ಯ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ ಬಾವಿಗೆ ನೀರೆರೆಯುವ ಮೂಲಕ ನೀರಿಂಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನರಾಜ್, ಕಾರ್ಯಪಾಲಕ ಇಂಜಿನಿಯರ್ ರಾಜ ಲೋಗೊ ಅನಾವರಣ ಮಾಡಿದರು. ನೆಹರು ಯುವಕೇಂದ್ರ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜ ಮಾಹಿತಿಪತ್ರ ಬಿಡುಗಡೆ ಮಾಡಿದರು.
ಕಲ್ಯಾಣಪುರ ಗ್ರಾ. ಪಂ. ಅಧ್ಯಕ್ಷ ಕೃಷ್ಣ ದೇವಾಡಿಗ, ಮಳೆ ನೀರು ಕೊಯ್ಲು ಹರಿಕಾರ ರಾಜ್ಯ ಸಂಪನ್ಮೂಲವ್ಯಕ್ತಿ ಜೋಸೆಫ್ ಜಿ. ಎಂ. ರೆಬೆಲ್ಲೊ ಇದ್ದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಶೇಟ್, ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್, ಜೆಜೆಎಂ ಮುಖ್ಯಸ್ಥ ಗಿರೀಶ್ ಕಲ್ಯಾಣಪುರ ಹಾಗೂ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಕಾರ್ಯದರ್ಶಿ ದಿನಕರ್ ಇದ್ದರು.
ಕಲ್ಯಾಣಪುರ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಯೋಗಿತಾ ಬಿ. ಸ್ವಾಗತಿಸಿದರು. ಉಪಾಧ್ಯಕ್ಷ ಉದಯಕುಮಾರ್ ವಂದಿಸಿದರು. ಕಾರ್ಯದರ್ಶಿ ಸೀತಾ ನಿರೂಪಿಸಿದರು