Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹಾಲಕ್ಷ್ಮೀ ಬ್ಯಾಂಕ್ 18 ಶೇ. ಡಿವಿಡೆಂಡ್ ಘೋಷಣೆ

ಮಹಾಲಕ್ಷ್ಮೀ ಬ್ಯಾಂಕ್ 18 ಶೇ. ಡಿವಿಡೆಂಡ್ ಘೋಷಣೆ

ಉಡುಪಿ: ಇಲ್ಲಿನ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಮಹಾಸಭೆ ಈಚೆಗೆ ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆಯಲ್ಲಿ ನಗರದ ಪುರಭವನದಲ್ಲಿ ನಡೆಯಿತು.

ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದೆ. ವಿಶೇಷವಾಗಿ ಮೀನುಗಾರರು, ಕೃಷಿಕಕರಿಗೆ ಸರಕಾರದ ವಿವಿಧ ಯೋಜನೆಗಳಾದ ಶೂನ್ಯ ಬಡ್ಡಿದರದ ಸಾಲ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸಬ್ಸಿಡಿ ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗುವಂತೆ ಮಾಡಲುದ್ದೇಶಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸಾಮಾನ್ಯ ಸೇವಾ ಕೇಂದ್ರ ಆರಂಭಿಸುವ ಯೋಜನೆ ಹಾಗೂ ಎಟಿಎಂ ಸೌಲಭ್ಯದೊಂದಿಗೆ ಹವಾನಿಯಂತ್ರಿತವಾಗಿ ನವೀಕೃತಗೊಳ್ಳುತ್ತಿರುವ ಉಚ್ಚಿಲ ಶಾಖೆ ಉದ್ಘಾಟನೆ ಜನವರಿಯಲ್ಲಿ ನಡೆಯಲಿದೆ ಎಂದು ಯಶಪಾಲ್ ತಿಳಿಸಿದರು.

ಗತ ಆರ್ಥಿಕ ವರ್ಷದಲ್ಲಿ 5.08 ಕೋ. ರೂ. ಲಾಭ ಹಾಗೂ 1.61 ಕೋ. ರೂ. ನಿವ್ವಳ ಲಾಭ ಗಳಿಸಿದೆ. 2019- 20ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿ 157 ಕೋ. ಹಾಗೂ ಸಾಲ ಮತ್ತು ಮುಂಗಡ 131 ಕೋ. ರೂ.ಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು 1,500.68 ಕೋ., ದುಡಿಯುವ ಬಂಡವಾಳ 18,757.55 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.

ಬ್ಯಾಂಕ್ ‘ಎ’ ದರ್ಜೆಯಲ್ಲಿದ್ದು, ಬ್ಯಾಂಕಿನ ಸದಸ್ಯರಿಗೆ 18 ಶೇ. ಡಿವಿಡೆಂಡ್ ವಿತರಿಸಲು ನಿರ್ಧರಿಸಲಾಯಿತು. ಅದರಲ್ಲಿ 3 ಶೇ.ನ್ನು ಸಮಾಜ ಕಲ್ಯಾಣ ನಿಧಿಗೆ ವಿನಿಯೋಗಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬ್ಯಾಂಕಿನ ನಿವೃತ್ತ ಸಿಬಂದಿ ಯಶವಂತ್, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೇಯ ಕುಂದರ್ ಮತ್ತು ಹರ್ಷ ಎಸ್. ಅವರನ್ನು ಅಭಿನಂದಿಸಲಾಯಿತು.

ನಿರ್ದೇಶಕರಾದ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ. ಕೋಟ್ಯಾನ್, ಹೇಮನಾಥ ಜೆ. ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್., ವಿನಯ ಕರ್ಕೇರ, ನಾರಾಯಣ ಟಿ. ಅಮೀನ್, ಸುರೇಶ್ ಬಿ. ಕರ್ಕೇರ, ಬಿ. ಬಿ. ಕಾಂಚನ್, ಶಿವರಾಮ ಕುಂದರ್, ವನಜಾ ಎಚ್. ಕಿದಿಯೂರು ಮತ್ತು ವನಜ ಜೆ. ಪುತ್ರನ್, ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್. ಕೆ., ಬ್ಯಾಂಕಿನ ಸಲಹೆಗಾರ ಆನಂದ ಎನ್. ಪುತ್ರನ್ ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕ ಜಿ. ಕೆ. ಶೀನ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!