Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮಹಿಳಾ ಮೋರ್ಚಾ ವತಿಯಿಂದ ಗೋ ಮಾತಾ ಪೂಜನ

ಮಹಿಳಾ ಮೋರ್ಚಾ ವತಿಯಿಂದ ಗೋ ಮಾತಾ ಪೂಜನ

ಉಡುಪಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿ ಬಳಿ ಗೋ ಮಾತಾ ಪೂಜನ (ಗೋಪೂಜೆ) ನಡೆಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಗೋವಿಗೆ ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನವಿದೆ. ಗೋ ಮಾತಾ ಪೂಜನ, ಸನಾತನ ಧರ್ಮದ ಪ್ರತೀಕ. ಅವಿಭಕ್ತ ಕುಟುಂಬ ಪದ್ಧತಿ ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ದೀಪಾವಳಿ ಹಬ್ಬ ಅಂಗವಾಗಿ ಗೋ ಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಂಡು ಹಿಂದೂ ಧರ್ಮದ ಗತ ವೈಭವ ಮರುಕಳಿಸುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಮೋರ್ಚಾ, ನಗರ ಪ್ರದೇಶದ ಮಹಿಳೆಯರನ್ನು ಸಂಘಟಿಸಿ ಗೋ ಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯಶಪಾಲ್ ಸುವರಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ, ಸಂಘ ಪರಿವಾರದ ಹಿರಿಯ ಮಹಿಳೆ ಸುಪ್ರಭಾ ಆಚಾರ್ಯ, ಜಿಲ್ಲಾ ಮಹಿಳಾ ಮೋರ್ಚಾ ಉಸ್ತುವಾರಿ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪ್ರಮೀಳಾ ಹರೀಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್, ಮಾತೃ ಮಂಡಳಿ ಕಡಿಯಾಳಿ ಅಧ್ಯಕ್ಷೆ ಪದ್ಮಾ ರತ್ನಾಕರ, ಹಿರಿಯರಾದ ಮಂಜುಳಾ ನಾಯಕ್, ಶಕುಂತಳಾ ಶೆಟ್ಟಿ, ಜಯಶ್ರೀ ಶೇಟ್, ಪದಾಧಿಕಾರಿಗಳಾದ ವಿದ್ಯಾ ಪೈ, ನೀರಜಾ ಶೆಟ್ಟಿ, ರೇಣುಕಾ ಕಡೆಕಾರ್, ಮಾಯಾ ಕಾಮತ್, ಶೋಭಾ, ಆಶಾ ಶೆಟ್ಟಿ, ರಮಾ, ಅಶ್ವಿನಿ, ದಯಾಶಿನಿ, ಲೈಲಾ, ಜುಬೇದಾ, ಸುಜಾಲ, ಸುಧಾ ಪೈ ಮೊದಲಾದವರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!