Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಮಾತೃದೇವತೆಗೆ ನಮೋ ನಮಃ

ಮಾತೃದೇವತೆಗೆ ನಮೋ ನಮಃ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ಮಾತೃದೇವತೆಗೆ ನಮೋ ನಮಃ
ನವದೆಹಲಿ: ಊರಿಗೆ ಅರಸನಾದರೂ ತಾಯಿಗೆ ಮಗ ಎಂಬ ಮಾತಿಗೆ ಪೂರಕವಾಗಿ ದೇಶಕ್ಕೆ ಪ್ರಧಾನಿಯಾದರೇನಂತೆ ತಾಯಿಗೆ ಮಗನೇ ಅಲ್ಲವೇ?

100ನೇ ವಸಂತಕ್ಕೆ ಕಾಲಿಡುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ (ನಮೋ), ಆಕೆಯ ಪಾದ ಪ್ರಕ್ಷಾಲನ ಮಾಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಮಾತೃಶ್ರಿಯವರಿಗೆ ಶುಭ ಹಾರೈಸಿದ ಮೋದಿ, ಟ್ವೀಟರ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮಾತೆ ಎಂಬುದು ಕೇವಲ ಪದವಲ್ಲ, ಇದು ಭಾವನೆಗಳ ವ್ಯಾಪ್ತಿಯನ್ನು ಸೆರೆಹಿಡಿಯುತ್ತದೆ. ಇಂದು ಜೂನ್ 18 ನನ್ನ ತಾಯಿ ಹೀರಾಬಾ ತನ್ನ 100ನೇ ವರ್ಷಕ್ಕೆ ಕಾಲಿಡುತ್ತಿರುವ ದಿನ. ಈ ವಿಶೇಷ ದಿನದಂದು ನಾನು ಸಂತೋಷ ಮತ್ತು ಕೃತಜ್ಞತೆ ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ ಎಂದು ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಾಯಿಗೆ ಜನ್ಮದಿನದ ಉಡುಗೊರೆಯಾಗಿ ಬ್ಲಾಗ್ ವೊಂದನ್ನು ಬರೆದಿದ್ದಾರೆ.

ತಮ್ಮ ಬ್ಲಾಗ್ ನಲ್ಲಿ ಪ್ರಧಾನಿ, ತನ್ನ ತಾಯಿ ಹೀರಾಬೆನ್ ಅವರನ್ನು ಸರಳ ಆದರೆ, ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದಾರೆ. ಅವರು ಚಿಕ್ಕಂದಿನಲ್ಲೇ ತಮ್ಮ ತಾಯಿಯನ್ನು ಕಳೆದುಕೊಂಡರು. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಕಷ್ಟಗಳ ಮಧ್ಯೆಯೇ ದೃಢವಾಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿ, ತಮ್ಮ ಬಾಲ್ಯದ ಕೆಲವು ವಿಶೇಷ ಕ್ಷಣಗಳನ್ನು ತಮ್ಮ ತಾಯಿಯೊಂದಿಗೆ ಕಳೆದಿರುವುದನ್ನು ನೆನಪಿಸಿಕೊಂಡಿದ್ದಾರೆ.

ತಾನು ಬೆಳೆದಂತೆ ಅವರ ತಾಯಿ ಮಾಡಿದ ಹಲವಾರು ತ್ಯಾಗಗಳನ್ನು ಸ್ಮರಿಸಿದ್ದಾರೆ ಮತ್ತು ಅವರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ರೂಪಿಸಿದ ಅವರ ತಾಯಿಯಲ್ಲಿನ ವಿವಿಧ ಗುಣಗಳನ್ನು ಪ್ರಸ್ತಾಪಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!