Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕುಂಜಾಲು ನಿವಾಸಿಯ ಮಾದರಿ ಗೋಸೇವೆ

ಕುಂಜಾಲು ನಿವಾಸಿಯ ಮಾದರಿ ಗೋಸೇವೆ

ಉಡುಪಿ: ನೀಲಾವರ ಗ್ರಾಮದ ಕುಂಜಾಲು ನಿವಾಸಿ ರಾಮಚಂದ್ರ ರಾವ್ ಎಂಬವರು ಕಳೆದ 13 ವರ್ಷದಿಂದ ಒಂದು ಲಾರಿ ಲೋಡ್ ಒಣ ಹುಲ್ಲನ್ನು ಖರೀದಿಸಿ ನೀಲಾವರ ಗೋಶಾಲೆಗೆ ಸದ್ದಿಲ್ಲದೇ ಒಪ್ಪಿಸುತ್ತಿರುವ ಮಾದರಿ ಕಾರ್ಯದ ಬಗ್ಗೆ ಗೋಶಾಲೆಯ ಆಧ್ವಯರ್ು ಪೇಜಾವರ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಮೂರನೇ ದರ್ಜೆಯ ಆರೋಗ್ಯ ಸಹಾಯಕ ಹುದ್ದೆಯ ನಿವೃತ್ತ ನೌಕರರಾಗಿರುವ ರಾಮಕ್ಷತ್ರಿಯ ಸಮುದಾಯದವರಾಗಿರುವ ರಾಮಚಂದ್ರ ರಾವ್, ತನ್ನೂರಿನಲ್ಲೇ ಈ ಗೋಶಾಲೆ ಇದ್ದರೂ ಒಮ್ಮೆಯೂ ನೋಡಿರಲಿಲ್ಲ!

ಒಮ್ಮೆ ಹೀಗೇ ರಸ್ತೆಯಂಚಿನಲ್ಲೇ ಇರುವ ಮನೆ ಮುಂದೆ ನಿಂತಿರುವಾಗ ಬೆಂಗಳೂರಿನ ಭಕ್ತರಿಬ್ಬರು ಕಾರಿನಲ್ಲಿ ಆ ರಸ್ತೆಯಲ್ಲಿ ಬಂದವರೇ ತನ್ನನ್ನು ಕಂಡು ಗೋಶಾಲೆಗೆ ಹೋಗುವ ದಾರಿ ಬಗ್ಗೆ ಕೇಳಿದರಂತೆ. ಕೊನೆಗೆ ತಾನೇ ಅವರ ಜೊತೆ ಕಾರಲ್ಲಿ ಗೋಶಾಲೆ ತೋರಿಸುವ ನಿರ್ಧಾರ ಮಾಡಿ ಕರೆದುಕೊಂಡು ಬಂದರಂತೆ.

ಅಲ್ಲಿನ ಗೋಶಾಲೆ ಕಂಡವರೇ ಪೇಜಾವರ ಶ್ರೀಪಾದರು ತಮ್ಮೂರಲ್ಲಿ ಇಷ್ಟು ದೊಡ್ಡ ಗೋಶಾಲೆ ಕಟ್ಟಿ ಇಷ್ಟೊಂದು ಹಸುಗಳನ್ನು ಯಾವ ಆದಾಯವೂ ಇಲ್ಲದೇ ಪೋಷಿಸುತ್ತಿದ್ದರೂ ತಾನು ಈ ತನಕ ಇದನ್ನು ನೋಡಿಯೂ ಇಲ್ಲದಿರುವ ಬಗ್ಗೆ ಮನಸ್ಸಲ್ಲೇ ಮುಜುಗರ ಪಟ್ಟರಂತೆ.

ಅಲ್ಲಿಂದ ಬಂದವರೇ ನಾಲ್ಕೈದು ದಿನಗಳಲ್ಲೇ ತನ್ನ ಪಿಂಚಣಿಯ ಉಳಿತಾಯದ ಹಣದಲ್ಲಿ ಒಂದು ಲಾರಿ ಲೋಡ್ ನಷ್ಟು ಹುಲ್ಲು ಖರೀದಿಸಿ ಗೋಶಾಲೆಗೆ ಕೊಟ್ಟು ಸಂತೋಷಪಟ್ಟರಂತೆ. ಈ ವಿಷಯವನ್ನು ತನ್ನ ಹೆಂಡತಿ, ಮಕ್ಕಳಲ್ಲೂ ತಿಳಿಸಿದಾಗ ಅವರೂ ಬೆಂಬಲ ಸೂಚಿಸಿದರಂತೆ.

ಅಲ್ಲಿಂದ ಇಲ್ಲಿಯ ವರೆಗೆ ನಿರಂತರವಾಗಿ ಪ್ರತೀ ವರ್ಷ ಒಂದು ಲಾರಿ ಲೋಡ್ ನಷ್ಟು ಹುಲ್ಲನ್ನು ಗೋಶಾಲೆಯ ಗೋವುಗಳಿಗೆ ಅರ್ಪಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಒಂದು ವೇಳೆ ಸ್ಥಳೀಯವಾಗಿ ಹುಲ್ಲು ಸಿಗದಿದ್ದಲ್ಲಿ ಹೊನ್ನಾಳಿ, ಸಾಗರ, ತೀರ್ಥಹಳ್ಳಿಗಳಿಂದಲಾದರೂ ಖರೀದಿಸಿ ಕೊಡುತ್ತಿದ್ದಾರೆ.

ಪ್ರಸ್ತುತ 72ರ ಹರೆಯದ ರಾಯರು ತುಂಬ ಶಿಸ್ತಿನ ಜೀವನ ಕ್ರಮ ರೂಢಿಸಿಕೊಂಡವರಾಗಿದ್ದು, ಅವರಲ್ಲಿ ಯಾವುದೇ ವಾಹನಗಳಿಲ್ಲ. ಅಸುಪಾಸಿನಲ್ಲಿ ಎಲ್ಲಿಗೇ ಹೋದರೂ ನಡೆದುಕೊಂಡೇ ಹೋಗುತ್ತಾರೆ. ಬೆಂಗಳೂರಿನಲ್ಲೇ ಬಹಳ ವರ್ಷ ಕಾಲ ಸರ್ಕಾರಿ ಸೇವೆಯಲ್ಲಿದ್ದಾಗಲೂ ಒಂದು ದಿನವೂ ಹೋಟೆಲ್ ಗೆ ಹೋದವರಲ್ಲವಂತೆ, ರಿಕ್ಷಾ ಹತ್ತಿದವರಲ್ಲವಂತೆ. ಊರಿಗೆ ಬರುವಾಗಲೂ ಯಾವತ್ತೂ ಸರಕಾರಿ ಬಸ್ಸಲ್ಲೇ ಅವರ ಪಯಣ.

ಪತ್ನಿ, ಒಬ್ಬ ಮಗ ಮತ್ತು ಒಬ್ಬ ಮಗಳೊಂದಿನ ಚಿಕ್ಕ ಸಂಸಾರ ನಡೆಸುತ್ತಿರುವ ರಾಮಚಂದ್ರ ರಾವ್ ಗೋಸೇವೆ ಅನುಕರಣೀಯ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!