Wednesday, July 6, 2022
Home ಸಮಾಚಾರ ಅಪರಾಧ ಮಾರಕಾಸ್ತ್ರದೊಂದಿಗೆ ಓಡಾಡುತ್ತಿದ್ದ ಈರ್ವರ ಬಂಧನ

ಮಾರಕಾಸ್ತ್ರದೊಂದಿಗೆ ಓಡಾಡುತ್ತಿದ್ದ ಈರ್ವರ ಬಂಧನ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 5

ಮಾರಕಾಸ್ತ್ರದೊಂದಿಗೆ ಓಡಾಡುತ್ತಿದ್ದ ಈರ್ವರ ಬಂಧನ
ಕುಂದಾಪುರ: ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿ ಇಲ್ಲಿನ ಜೂನಿಯರ್ ಕಾಲೇಜ್ ಪರಿಸರದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ಇಬ್ಬರನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದ್ದು, ಮೂವರು ಪರಾರಿಯಾಗಿದ್ದಾರೆ.

ಗಂಗೊಳ್ಳಿಯ ಅಬ್ದುಲ್ ಮಜೀದ್ (32) ಹಾಗೂ ರಜಬ್ (41) ಬಂಧಿತರಾಗಿದ್ದು, ಖಲೀಲ್, ರಿಜ್ವಾನ್ ಹಾಗೂ ಇಫ್ತೀಕರ್ ಪರಾರಿಯಾದವರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿ ಅಬ್ದುಲ್ ಮಜೀದ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ ದಾಖಲಾಗಿದೆ. ಅಲ್ಲದೇ, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ.

ಆರೋಪಿ ರಜಬ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.

ಆರೋಪಿಗಳು ಮತೀಯವಾಗಿ ಕೋಮು ಸಂಘರ್ಷ ಉಂಟುಮಾಡುವ ಪ್ರವೃತ್ತಿಯವರಾಗಿದ್ದು ಮಾರಕಾಯುಧಗಳೊಂದಿಗೆ ಮಾರಕಾಯುಧಗಳನ್ನು ಬೀಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯವುಂಟುಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!