Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾಹೆ ಟ್ರಸ್ಟ್ ಗೆ ದೇಣಿಗೆ

ಮಾಹೆ ಟ್ರಸ್ಟ್ ಗೆ ದೇಣಿಗೆ

ಉಡುಪಿ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಅಪಘಾತ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ ಸೌಲಭ್ಯ ಅಭಿವೃದ್ಧಿಪಡಿಸಲು ದಾನಿ ಮೋಹನ್ ಶೆಣೈ ಎರ್ಮಾಳ್ ಮತ್ತು ಅರುಣಾ ಎಂ. ಶೆಣೈ ಅವರು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಟ್ರಸ್ಟ್ಗೆ 20 ಲಕ್ಷ ರೂ. ಕೊಡುಗೆ ನೀಡಿದರು.

ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.

ದಾನಿಗಳಾದ ತುಕಾರಾಮ ನಾಯಕ್ ಮತ್ತು ಸುವರ್ಣಾ ನಾಯಕ್, ಮಾಹೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಎಚ್. ವಿನೋದ ಭಟ್ ಮತ್ತು ಕಾರ್ಕಳ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ಇದ್ದರು.

ದಾನಿಗಳ ಕೊಡುಗೆಯನ್ನು ಅಭಿನಂದಿಸಿದ ಡಾ. ಎಚ್. ಎಸ್. ಬಲ್ಲಾಳ್, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಒದಗಿಸಿಕೊಡಲು ಮತ್ತು ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ಈ ದೇಣಿಗೆ ಸಹಕಾರಿಯಾಗಲಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!