Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾ. 9ರಂದು 'ಪವರ್' ವಾರ್ಷಿಕೋತ್ಸವ

ಮಾ. 9ರಂದು ‘ಪವರ್’ ವಾರ್ಷಿಕೋತ್ಸವ

ಸುದ್ದಿಕಿರಣ ವರದಿ
ಸೋಮವಾರ, ಮಾರ್ಚ್ 7

ಮಾ. 9ರಂದು ‘ಪವರ್’ ವಾರ್ಷಿಕೋತ್ಸವ
ಉಡುಪಿ: ಮಹಿಳಾ ಉದ್ಯಮಶೀಲತೆ ಪ್ರೇರಣಾ ಸಂಸ್ಥೆ ಮಣಿಪಾಲ ಪವರ್ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಚಾರ್ಟರ್ ಡೇ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಮಾರ್ಚ್ 9ರಂದು ನಡೆಯಲಿದೆ ಎಂದು ಪವರ್ ಅಧ್ಯಕ್ಷೆ ತಾರಾ ತಿಮ್ಮಯ್ಯ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಅಂದು ಸಂಜೆ 5.30 ಗಂಟೆಗೆ ಮಣಿಪಾಲ ಕಂಟ್ರಿ ಇನ್ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಾಡಾಗಿದ್ದು ಅಭ್ಯಾಗತರಾಗಿ ಖ್ಯಾತ ಚಲನಚಿತ್ರ ನಟಿ ವಿನಯಾ ಪ್ರಸಾದ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಆಗಮಿಸುವರು.


ಈ ಸಂದರ್ಭದಲ್ಲಿ ಮಹಿಳಾ ಸಾಧಕಿ ರಾಧಾ ದಾಸ್ ಕುಂಭಾಶಿ ಅವರನ್ನು ಸನ್ಮಾನಿಸಲಾಗುವುದು ಎಂದು ತಾರಾ ತಿಮ್ಮಯ್ಯ ವಿವರಿಸಿದರು.

ಪದಗ್ರಹಣ
ಇದೇ ಸಂದರ್ಭದಲ್ಲಿ 2022- 23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
ನೂತನ ಅಧ್ಯಕ್ಷೆಯಾಗಿ ಪೂನಮ್ ಶೆಟ್ಟಿ ಹಾಗೂ ಉಪಾಧ್ಯಕ್ಷೆ ಸುವರ್ಷಾ ಮಿನ್ಜ್, ಕಾರ್ಯದರ್ಶಿ ಅರ್ಚನಾ ರಾವ್, ಕೋಶಾಧಿಕಾರಿ ಪ್ರತಿಭಾ ಆರ್. ವಿ. ಮತ್ತು ಜೊತೆ ಕಾರ್ಯದರ್ಶಿ ತೃಪ್ತಿ ನಾಯಕ್ ಪದಗ್ರಹಣ ಮಾಡಲಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಪವರ್ ಉಪಾಧ್ಯಕ್ಷೆ ಸುಗುಣ ಶಂಕರ್, ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಶಾಲಿನಿ ಬಂಗೇರ, ಜೊತೆ ಕಾರ್ಯದರ್ಶಿ ಪಲ್ಲವಿ ಬೆಹರಾ, ನಿಯೋಜಿತ ಅಧ್ಯಕ್ಷೆ ಪೂನಮ್ ಶೆಟ್ಟಿ, ಅರ್ಚನಾ ರಾವ್, ಪ್ರತಿಭಾ, ರೇಣು ಜಯರಾಮ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!